ನವೆಂಬರ್ 23 ರಂದು ನೋವು ನಿವರಣೆಗಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ
ಹೊಸಪೇಟೆ, 19 ನವೆಂಬರ್ (ಹಿ.ಸ.) : ಆ್ಯಂಕರ್ : ನಗರದ ರೈಲ್ವೇ ಸ್ಟೇಷನ್ ರಸ್ತೆಯ ರೋಟರಿ ಕ್ಲಬ್‌ನಲ್ಲಿ ನವೆಂಬರ್.23 ರಂದು ಬೆಳಿಗ್ಗೆ 9.30 ಗಂಟೆಯಿAದ ಸಂಜೆ 4 ಗಂಟೆಯವರೆಗೆ ನೋವು ನಿವಾರಣೆಗಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ಆಯುರ್ವೇ
ನವೆಂಬರ್ 23 ರಂದು ನೋವು ನಿವರಣೆಗಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ


ಹೊಸಪೇಟೆ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ನಗರದ ರೈಲ್ವೇ ಸ್ಟೇಷನ್ ರಸ್ತೆಯ ರೋಟರಿ ಕ್ಲಬ್‌ನಲ್ಲಿ ನವೆಂಬರ್.23 ರಂದು ಬೆಳಿಗ್ಗೆ 9.30 ಗಂಟೆಯಿAದ ಸಂಜೆ 4 ಗಂಟೆಯವರೆಗೆ ನೋವು ನಿವಾರಣೆಗಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ. ಮುನಿವಾಸುದೇವ ರೆಡ್ಡಿ ತಿಳಿಸಿದ್ದಾರೆ.

ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ ದೀರ್ಘಕಾಲಿನ ನೋವುಗಳಾದ ಸೊಂಟ ನೋವು, ಕುತ್ತಿಗೆ ನೋವು, ಭುಜನೋವು, ಬೆನ್ನು ನೋವು, ಮಂಡಿ ನೋವು, ಸಂಧಿವಾತ, ಅಮವಾತ, ನರರೋಗಗಳು ಸೇರಿದಂತೆ ಎಲ್ಲಾ ವಿಧದ ತೀವ್ರ ನೋವುಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಪÀರಿಣಿತ ಮತ್ತು ತಜ್ಞ ಆಯುರ್ವೇದ ವೈದ್ಯರಿಂದ ಉಚಿತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಅಗ್ನಿಕರ್ಮ ಮತ್ತು ಮರ್ಮ ಚಿಕಿತ್ಸೆ ವೇದನಾ ನಿರ್ವಹಣೆಗೆ ಪರಿಣಾಮಕಾರಿ ವಿಧಾನಗಳನ್ನು ತಿಳಿಸಲಾಗುತ್ತದೆ. ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಯೋಗಾಸನಗಳ ಮಾರ್ಗದರ್ಶನ ಮತ್ತು ಉಚಿತ ಲಭ್ಯ ಆಯುರ್ವೇದ ಔಷಧಿಗಳನ್ನು ವಿತರಣೆ ಮಾಡಲಾಗುತ್ತದೆ. ಸಕ್ಕರೆ ಕಾಯಿಲೆಗೆ ಉಚಿತ ರಕ್ತ ಪರೀಕ್ಷೆ ಹಾಗೂ ಅಗತ್ಯವಿದ್ದಲ್ಲಿ ಮೂಳೆ ಸಾಂದ್ರತೆಯ ಪರೀಕ್ಷೆ ಮಾಡಲಾಗುತ್ತದೆ.

ಚಿಕಿತ್ಸೆಗೆ ಬರುವವರು ಹಳೆಯ ವೈದ್ಯಕೀಯ ವರದಿಗಳು(ಎಕ್ಸರೇ ಮತ್ತು ಎಂಆರ್‌ಎಫ್) ತರಬೇಕು ಹಾಗೂ ಈಗಾಗಲೇ ಬಳಸುತ್ತಿರುವ ಔಷಧಿಗಳ ವಿವರಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಮತ್ತು ಮುಂಗಡ ನೊಂದಣಿಗಾಗಿ ಮೊ: 9535981085 ಸಂಖ್ಯೆಯನ್ನು ಸಂಪರ್ಕಿಸಬೇಕೆ0ದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande