ಸುಕ್ಮಾದಲ್ಲಿ ಭದ್ರತಾ ಪಡೆ–ನಕ್ಸಲ್ ನಡುವೆ ಗುಂಡಿನ ಚಕಮಕಿ
ರಾಯ್‌ಪುರ, 16 ನವೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಭೆಜ್ಜಿ–ಕರಿಗುಂಡಂ ಮತ್ತು ಚಿಂತಗುಫಾ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆಯಿಂದ ಭದ್ರತಾ ಪಡೆಯ ಮತ್ತು ನಕ್ಸಲರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ ಮೂವರು ನಕ್ಸಲ
ಸುಕ್ಮಾದಲ್ಲಿ ಭದ್ರತಾ ಪಡೆ–ನಕ್ಸಲ್ ನಡುವೆ ಗುಂಡಿನ ಚಕಮಕಿ


ರಾಯ್‌ಪುರ, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಭೆಜ್ಜಿ–ಕರಿಗುಂಡಂ ಮತ್ತು ಚಿಂತಗುಫಾ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆಯಿಂದ ಭದ್ರತಾ ಪಡೆಯ ಮತ್ತು ನಕ್ಸಲರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ ಮೂವರು ನಕ್ಸಲರು ಬಲಿಯಾಗಿರುವ ಸಾಧ್ಯತೆ ಇದೆ. ಆದರೆ ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಸ್ಥಳೀಯ ನಕ್ಸಲ್ ಚಟುವಟಿಕೆಗಳ ಬಗ್ಗೆ ಸ್ಪಷ್ಟ ಸುಳಿವಿನ ಮೇಲೆ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಪಡೆ ಶೋಧ ಕಾರ್ಯಾಚರಣೆಗೆ ತೆರಳಿತ್ತು. ಸಿಬ್ಬಂದಿ ದಟ್ಟ ಕಾಡಿನ ಪ್ರದೇಶ ಪ್ರವೇಶಿಸಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಪಡೆಗಳು ತಕ್ಷಣ ಪ್ರತಿದಾಳಿ ಆರಂಭಿಸಿವೆ.

ಘಟನಾ ಸ್ಥಳ ದಟ್ಟ ಕಾಡು ಮತ್ತು ಬೆಟ್ಟಗಳಿಂದ ಕೂಡಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯಗೊಳ್ಳುವುದಕ್ಕೆ ಸಮಯ ಹಿಡಿಯಬಹುದೆಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande