
ಕೋಲ್ಕತ್ತಾ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಪೂರ್ವ ಕಮಾಂಡ್‌ನ ಜೀಯೊಸಿ-ಇನ್-ಚೀಫ್ ಲೆ. ಜ. ರಾಮಚಂದರ್ ತಿವಾರಿ ಅವರು ಅರುಣಾಚಲ ಪ್ರದೇಶದ ಉತ್ತರ ಗಡಿಗಳಿಗೆ ಭೇಟಿ ನೀಡಿ, ಸ್ಪಿಯರ್ ಕಾರ್ಪ್ಸ್‌ನ ಮುಂಚೂಣಿ ಠಾಣೆಗಳ ಕಾರ್ಯಾಚರಣಾ ಸನ್ನದ್ಧತೆ ಮತ್ತು ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಭಾರತೀಯ ಸೇನೆ, ವಾಯುಪಡೆ ಮತ್ತು ಐಟಿಬಿಪಿ ನಡುವಿನ ಜಂಟಿ ಕಾರ್ಯಾಚರಣೆ, ಆಧುನಿಕ ಶಸ್ತ್ರ ವ್ಯವಸ್ಥೆಗಳು ಹಾಗೂ ಕಣ್ಗಾವಲು ತಂತ್ರಜ್ಞಾನಗಳ ಬಳಕೆಯ ಕುರಿತು ಅವರಿಗೆ ಮಾಹಿತಿ ನೀಡಲಾಯಿತು. ಸೈನಿಕರು ಪ್ರದರ್ಶಿಸಿದ ಶಿಸ್ತು ಮತ್ತು ಯುದ್ಧಕೌಶಲ್ಯವನ್ನು ತೀವಾರಿ ಮೆಚ್ಚಿದರು.
ಗಡಿಭಾಗದ ಭದ್ರತೆ ಮತ್ತು ಸನ್ನದ್ಧತೆಯನ್ನು ಉತ್ತೇಜಿಸಲು ನಿರಂತರ ತರಬೇತಿ ಮತ್ತು ತಂತ್ರಜ್ಞಾನ ಬಳಕೆ ಅಗತ್ಯವೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಾಮಾಜಿಕ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿಯೋಮ್ ಟೇಲ್ಸ್ ಯೂಟ್ಯೂಬ್ ಚಾನೆಲ್‌ನ್ನು ಅವರು ಆರಂಭಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa