ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ದ : ಪ್ರಧಾನಿ
ನರ್ಮದಾ, 15 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜಕೀಯ ಸಬಲೀಕರಣವಿಲ್ಲದೆ ಅಭಿವೃದ್ಧಿ ಸಂಪೂರ್ಣವಾಗುವುದಿಲ್ಲ. ಬುಡಕಟ್ಟು ಸಮುದಾಯವನ್ನು ದೇಶದ ಅತ್ಯುನ್ನತ ಹುದ್ದೆಗಳಿಗೆ ಏರಿಸುವ ಸಂಕಲ್ಪಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ನರ್ಮದಾ ಜಿಲ್ಲೆಯ ದೇಧಿಯ
Pm


ನರ್ಮದಾ, 15 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜಕೀಯ ಸಬಲೀಕರಣವಿಲ್ಲದೆ ಅಭಿವೃದ್ಧಿ ಸಂಪೂರ್ಣವಾಗುವುದಿಲ್ಲ. ಬುಡಕಟ್ಟು ಸಮುದಾಯವನ್ನು ದೇಶದ ಅತ್ಯುನ್ನತ ಹುದ್ದೆಗಳಿಗೆ ಏರಿಸುವ ಸಂಕಲ್ಪಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುಜರಾತ್‌ನ ನರ್ಮದಾ ಜಿಲ್ಲೆಯ ದೇಧಿಯಾಪಾದದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಬುಡಕಟ್ಟು ಹೆಮ್ಮೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಮಾತನಾಡಿದರು. ಸುಮಾರು ₹9,700 ಕೋಟಿ ಮೌಲ್ಯದ ರಸ್ತೆ, ಆರೋಗ್ಯ, ಶಿಕ್ಷಣ, ನೀರು ಮತ್ತು ಸಂಪರ್ಕ ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ ನೆರವೇರಿಸಿದ ಅವರು, ಈ ಹೂಡಿಕೆಯು ಬುಡಕಟ್ಟು ಪ್ರದೇಶಗಳ ಜೀವನಮಟ್ಟದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ ಎಂದು ಹೇಳಿದರು.

ಯಾವುದೇ ಸಮಾಜದ ಒಟ್ಟಾರೆ ಪ್ರಗತಿಗೆ ರಾಜಕೀಯ ನಾಯಕತ್ವ ಮತ್ತು ಸಮಾನ ಪ್ರತಿನಿಧಿತ್ವ ಅತ್ಯಗತ್ಯ. ಇಂದು ದೇಶದ ರಾಷ್ಟ್ರಪತಿ ಬುಡಕಟ್ಟು ಮಹಿಳೆ ಇದು ಕೇವಲ ಗೌರವವಲ್ಲ, ಭಾರತದ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯಕ್ಕೆ ಸಾಕ್ಷಿ, ಎಂದು ಪ್ರಧಾನಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande