ಮೆಕ್ಕೆಜೋಳ ರಾಶಿ ತುಂಬುವಾಗ ದಲ್ಲಾಳಿಗಳ ಗೋಲ್ಮಾಲ್, ರೈತರಿಂದ ಬಿತ್ತು ಗೂಸಾ
ಗದಗ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನ ಕುರ್ತಕೋಟಿಯಲ್ಲಿ ಮೆಕ್ಕೆಜೋಳ ಖರೀದಿಯ ವೇಳೆ ರೈತರನ್ನು ಮೋಸಗೊಳಿಸಲು ಮುಂದಾದ ದಲ್ಲಾಳಿಗಳಿಗೆ ರೈತರು ಪಾಠ ಕಲಿಸಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಸವನೂರು ಮೂಲದ ಕೆಲ ದಲ್ಲಾಳಿಗಳು ರೈತರಿಂದ ಮೆಕ್ಕೆಜೋಳ ಖರೀದಿಸುವ ವೇಳೆ, “25 ಚೀಲದ ಕಟ್ಟು”
ಫೋಟೋ


ಗದಗ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ಕುರ್ತಕೋಟಿಯಲ್ಲಿ ಮೆಕ್ಕೆಜೋಳ ಖರೀದಿಯ ವೇಳೆ ರೈತರನ್ನು ಮೋಸಗೊಳಿಸಲು ಮುಂದಾದ ದಲ್ಲಾಳಿಗಳಿಗೆ ರೈತರು ಪಾಠ ಕಲಿಸಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಸವನೂರು ಮೂಲದ ಕೆಲ ದಲ್ಲಾಳಿಗಳು ರೈತರಿಂದ ಮೆಕ್ಕೆಜೋಳ ಖರೀದಿಸುವ ವೇಳೆ, “25 ಚೀಲದ ಕಟ್ಟು” ಅಂತ ಹೇಳಿ ವಾಸ್ತವದಲ್ಲಿ “35 ಚೀಲದ ಕಟ್ಟು”ಗಳನ್ನು ತುಂಬಿಸಿಕೊಂಡು ರೈತರನ್ನು ಮೋಸಗೊಳಿಸುತ್ತಿದ್ದರು. ಸುಮಾರು ಐದು ಲಾರಿ ಮೆಕ್ಕೆಜೋಳ ಈ ರೀತಿಯಾಗಿ ತುಂಬಿಸಿಕೊಂಡು ಹೋಗಿದ್ದ ಖದೀಮರು, ಚೀಲದ ಲೆಕ್ಕ ತಪ್ಪಿಸಲು ತಂತ್ರದಾಟವಾಡಿದ್ದರು.

ಆದರೆ ರೈತರೊಬ್ಬರು ಚೀಲದ ಕಟ್ಟನ್ನು ಎಣಿಸುವ ವೇಳೆ ಅಸಮಂಜಸತೆ ಗಮನಿಸಿ ವಿಷಯ ಬಹಿರಂಗವಾಯಿತು. ಈ ವೇಳೆ ಸ್ಥಳದಲ್ಲಿದ್ದ ರೈತರು ಆಕ್ರೋಶಗೊಂಡು ದಲ್ಲಾಳಿಗಳಿಗೆ ಹಿಗ್ಗಾಮುಗ್ಗಾ ಗೂಸ ನೀಡಿ ಬಾಯಿಬಿಡಿಸಿದರು. ನಂತರ ದಲ್ಲಾಳಿಗಳನ್ನು ಪೊಲೀಸರಿಗೆ ಒಪ್ಪಿಸಲು ರೈತರು ಮುಂದಾಗಿದ್ದಾರೆ.

ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ರೈತರ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮೆಕ್ಕೆಜೋಳ ವ್ಯಾಪಾರದಲ್ಲಿ ನಡೆಯುತ್ತಿರುವ ಗೋಲ್ಮಾಲ್‌ಗಳು ಮತ್ತೆ ಬಯಲಾಗಿವೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande