ಕಂಪ್ಲಿ : ಮೂರು ದಿನಗಳ ಕೃಷಿ ತರಬೇತಿ
ಕಂಪ್ಲಿ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಕಂಪ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ವಿವಿಧ ಕೃಷಿ ಉಪಕರಣಗಳ ದುರಸ್ಥಿ ಹಾಗೂ ನಿರ್ವಹಣೆ ಕುರಿತು ನ.17 ರಿಂದ ನ.19 ರವರೆಗೆ ಮೂರು ದಿನಗಳ ವಿಶೇಷ ಸಾಂಸ್ಥಿಕ ತರಬೇತಿ ಕಾರ್ಯಕ್ರಮವನ್ನು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ
ಕಂಪ್ಲಿ : ಮೂರು ದಿನಗಳ ಕೃಷಿ ತರಬೇತಿ


ಕಂಪ್ಲಿ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಕಂಪ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ವಿವಿಧ ಕೃಷಿ ಉಪಕರಣಗಳ ದುರಸ್ಥಿ ಹಾಗೂ ನಿರ್ವಹಣೆ ಕುರಿತು ನ.17 ರಿಂದ ನ.19 ರವರೆಗೆ ಮೂರು ದಿನಗಳ ವಿಶೇಷ ಸಾಂಸ್ಥಿಕ ತರಬೇತಿ ಕಾರ್ಯಕ್ರಮವನ್ನು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು, ಮಹಿಳಾ ರೈತರು ನೋಂದಾಯಿಸಿಕೊಳ್ಳಬಹುದು.

ತರಬೇತಿಗೆ ಭಾಗವಹಿಸುವ ರೈತರಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಇದ್ದು, ಆಸಕ್ತಿಯುಳ್ಳ ರೈತರು ನೋಂದಣಿ ಮಾಡಿಕೊಳ್ಳಬಹುದು.

ಹೆಸರು ನೋಂದಾಯಿಸಿಕೊಳ್ಳಲು ಇಚ್ಛಿಸುವವರು ಕೃಷಿ ಅಧಿಕಾರಿ ಯೇಸುಬಾಬು-ಮೊ.6360645255, ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ-ಮೊ.7353533138 ಮತು ಕೃಷಿ ಅಧಿಕಾರಿ ನವ್ಯ ಪ್ರಶಾಂತ-ಮೊ.6360139316 ಗೆ ಸಂಪರ್ಕಿಸಬಹುದು ಎಂದು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande