ಕೊಪ್ಪಳ : ಸ್ವಚ್ಛ ಭಾರತ ಮಿಷನ್ 2.0 ಯೋಜನೆ, ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆ ಅರಿವು ಬೈಕ್ ರ‍್ಯಾಲಿ
ಕೊಪ್ಪಳ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಸ್ವಚ್ಚ ಭಾರತ ಮಿಷನ್ 2.0 ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ವತಿಯಿಂದ ಗುರುವಾರ ಬೈಕ್ ರ‍್ಯಾಲಿ ಮೂಲಕ
ಕೊಪ್ಪಳ: ಸ್ವಚ್ಛ ಭಾರತ ಮಿಷನ್ 2.0 ಯೋಜನೆ: ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆ ಅರಿವು ಬೈಕ್ ರ‍್ಯಾಲಿ


ಕೊಪ್ಪಳ: ಸ್ವಚ್ಛ ಭಾರತ ಮಿಷನ್ 2.0 ಯೋಜನೆ: ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆ ಅರಿವು ಬೈಕ್ ರ‍್ಯಾಲಿ


ಕೊಪ್ಪಳ: ಸ್ವಚ್ಛ ಭಾರತ ಮಿಷನ್ 2.0 ಯೋಜನೆ: ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆ ಅರಿವು ಬೈಕ್ ರ‍್ಯಾಲಿ


ಕೊಪ್ಪಳ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಸ್ವಚ್ಚ ಭಾರತ ಮಿಷನ್ 2.0 ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ವತಿಯಿಂದ ಗುರುವಾರ ಬೈಕ್ ರ‍್ಯಾಲಿ ಮೂಲಕ ಬೀದಿ ಬೀದಿಗಳಲ್ಲಿ ಸ್ವಚ್ಛತಾ ಸಂದೇಶಗಳನ್ನು ಸಾರಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ತುಕಾರಾಮಪ್ಪ ಚಂದ್ರಪ್ಪ ಗಡಾದ ಅವರು ಮಾತನಾಡಿ, ಸ್ವಚ್ಛತೆ ಕೆಲಸವು ದೇವರ ಕೆಲಸವಾಗಿದೆ ಎಂದು ಜನರು ಭಾವಿಸಬೇಕು. ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುಚಿತ್ವ ಕಾರ್ಯವನ್ನು ಪ್ರತಿದಿನ ಮಾಡಬೇಕು. ಕಸವನ್ನು ಎಲ್ಲಂದರಲ್ಲೇ ಬಿಸಾಡದೇ ಪಟ್ಟಣ ಪಂಚಾಯತ್ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಎಂದರು.

ಪ.ಪಂ ಉಪಾಧ್ಯಕ್ಷರಾದ ಹೊನ್ನೂರಸಾಬ ಮಹ್ಮದಸಾಬ ಬೈರಾಪೂರ ಅವರು ಮಾತನಾಡಿ, ಎಲ್ಲಾ ಸಾರ್ವಜನಿಕರು ನಮ್ಮ ಭಾಗ್ಯನಗರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು ಹಾಗೂ ಬಯಲು ಮಲ ವಿಸರ್ಜನೆ ಮಾಡದೇ, ವೈಯಕ್ತಿಕ ಶೌಚಾಲಯಗಳನ್ನು ಬಳಕೆ ಮಾಡಿ ಶುಚಿತ್ವವನ್ನು ಕಾಪಾಡುವಲ್ಲಿ ಸಹಕರಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ಮಾತನಾಡಿ, ಒಂದು ಊರು, ಗ್ರಾಮ ಅಥವಾ ಪಟ್ಟಣದ ಏಳ್ಗೆಯು ಸ್ವಚ್ಛತೆಯಲ್ಲಿ ಅಡಗಿದ್ದು, ಎಲ್ಲಾ ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸ್ವಚ್ಛತೆ ನಮ್ಮ ಅವಿಭಾಜ್ಯ ಅಂಗವಾಗಬೇಕು. ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದರು.

ಪ್ರತಿಜ್ಞಾ ವಿಧಿ ಸ್ವೀಕಾರ : ಇದೇ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರು ಮತ್ತು ಪ.ಪಂ ಕಾರ್ಯಾಲಯದ ಎಲ್ಲಾ ಸಿಬ್ಬಂದಿ ಸ್ವಚ್ಛತಾ ಹೀ ಸೇವಾ-2025ರ, ಪ್ರತಿಜ್ಞಾ ವಿಧಿಯಾದ “ನಾನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯದಂತೆ, ಸ್ವಚ್ಛ, ಸುಂದರ ಹಾಗೂ ಆರೋಗ್ಯಪೂರ್ಣ ಭಾರತವನ್ನು ನಿರ್ಮಿಸಲು ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ನಾನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅಥವಾ ತೆರೆದ ಚರಂಡಿಗಳಲ್ಲಿ, ಕಸ ಎಸೆಯುವುದಿಲ್ಲ. ನಾನು ನಮ್ಮ ಮನೆಯ ತ್ಯಾಜ್ಯವನ್ನು ಒಣ ಕಸ ಮತ್ತು ಹಸಿ ಕಸ ಗಳಾಗಿ ವಿಂಗಡಿಸಿ. ವಿಲೇವಾರಿ ಮಾಡಲು ಸಹಕರಿಸುತ್ತೇನೆ. ಏಕ-ಬಳಕೆಯ ಪ್ಲಾಸ್ಟಿಕ್ ಉಪಯೋಗವನ್ನು ತ್ಯಜಿಸಿ, ಬಟ್ಟೆ ಅಥವಾ ಪರಿಸರ ಸ್ನೇಹಿ ಸೆಣಬಿನ ಚೀಲಗಳನ್ನು ಬಳಸುತ್ತೇನೆ. ನಮ್ಮ ಸುತ್ತಮುತ್ತಲಿನ ಕೆರೆ, ನದಿ, ಬಾವಿ ಮತ್ತು ಇತರ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಂಡು ಅವುಗಳಿಗೆ ರಾಸಾಯನಿಕ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸೇರದಂತೆ ನೋಡಿಕೊಳ್ಳುತ್ತೇನೆ. ವರ್ಷಕ್ಕೆ ಕನಿಷ್ಠ 100 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ನನ್ನ ಕುಟುಂಬ, ಸ್ನೇಹಿತರು ಮತ್ತು ನೆರೆ ಹೊರೆಯವರೊಂದಿಗೆ ಈ ಪ್ರತಿಜ್ಞೆಯನ್ನು ಹಂಚಿಕೊಂಡು, ಅವರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತೇನೆ. ಮೇಲಿನ ಎಲ್ಲಾ ಅಂಶಗಳನ್ನು ಪಾಲಿಸುವ ಮೂಲಕ ನಮ್ಮ ನಗರ. ನಮ್ಮ ಜಿಲ್ಲೆ ಮತ್ತು ನಮ್ಮ ನಮ್ಮ ರಾಜ್ಯವನ್ನು ಸುಂದರವನ್ನಾಗಿಸಲು ಪ್ರಯತ್ನಿಸುತ್ತೆನೆ'' ಎಂಬ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಿದರು ಮತ್ತು ಪ್ರತಿಜ್ಞೆ ಪತ್ರದಲ್ಲಿ ಸಹಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande