
ಕೋಲಾರ, ೧೩ ನವೆಂಬರ್ (ಹಿ.ಸ) :
ಆ್ಯಂಕರ್ : ಅಂಗಾಂಗ ದಾನದ ಮೂಲಕ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಆದರೆ ಸಕಾಲದಲ್ಲಿ ಅಂಗಾಂಗ ದಾನ ಸಕಾಲದಲ್ಲಿ ದೊರೆಯದೆ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ ಈ ಅಂತರವನ್ನು ಕಡಿಮೆ ಮಾಡುವ ಮತ್ತು ಮರಣೋತ್ತರ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ದೃಢಸಂಕಲ್ಪದೊಂದಿಗೆ, ವೈಟ್ ಫೀಲ್ಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆಯು ಮುಂದಾಗಿದೆ ಎಂದು ವೈಟ್ ಫೀಲ್ಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಸಿ ವೈದ್ಯ ಡಾ. ವಿಷ್ಣುವರ್ಧನ್ ಬಿ.ಆರ್ ಹೇಳಿದರು.
ಕೋಲಾರ ನಗರದಲ್ಲಿ ನಡೆದ ಸುದಿಗೋಷ್ಟಿಯಲ್ಲಿ ಮಾತನಾಡಿ, ಪ್ರತಿವರ್ಷವೂ ಭಾರತದಲ್ಲಿ ಸಾವಿರಾರು ಜನರು, ಅಂಗಾಂಗ ದಾನದ ಮೂಲಕ ಪುನರ್ಜೀವನಕ್ಕಾಗಿ ಕಾಯುತ್ತಾ, ಸಾವು-ಬದುಕಿನ ನಡುವೆ ಸಂಘರ್ಷಿಸುತ್ತಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ ಸುಮಾರು ೧.೫ ಲಕ್ಷಜನರಿಗೆ ಅಂಗಾಂಗ ಕಸಿಯ ಶಿಫಾರಸು ಮಾಡಲಾಗುತ್ತದೆ. ಆದರೆ, ವಾಸ್ತವದಲ್ಲಿ ಕೇವಲ ೧೦,೦೦೦ ಕಸಿ ಶಸ್ತ್ರಚಿಕಿತ್ಸೆಗಳು ಮಾತ್ರ ನಡೆಯುತ್ತಿವೆ. ಭಾರತದಲ್ಲಿ ಅಂಗಾಂಗ ದಾನದ ಪ್ರಕ್ರಿಯೆ ಹೆಚ್ಚು ಪ್ರಚಲಿತವಿಲ್ಲ. ಪ್ರತಿಮಿಲಿಯನ್ ಜನಸಂಖ್ಯೆಗೆ ೦.೫ ದಾನಿಗಳಿರುವ ಭಾರತದ ಅಂಗಾಂಗ ದಾನದರವುಸ್ಪೇನ್ (ಪ್ರತಿಮಿಲಿಯನ್ಗೆ ೩೦) ಮತ್ತುಯುಎ (ಪ್ರತಿಮಿಲಿಯನ್ಗೆ ೨೦ ಕ್ಕಿಂತಹೆಚ್ಚು) ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.
ಅಂಗಾಂಗದಾನವು ಸಾವಿನಾಚೆ (ಮರಣೋತ್ತರ) ಇನ್ನೊಂದು ರೂಪದಲ್ಲಿ ಜೀವನ ಮುಂದುವರಿಸುವ ಪ್ರಕ್ರಿಯೆಯಾಗಿದೆ. ಓರ್ವ ಅಂಗಾಂಗದಾನಿಯು ಎಂಟು ಜೀವಗಳನ್ನು ಉಳಿಸುವ ಕ್ಷಮತೆಯನ್ನು ಹೊಂದಿರುತ್ತಾರೆ. ಅಂಗಾಂಶಗಳ ದಾನದ ಮೂಲಕ ಅನೇಕರ ಆರೋಗ್ಯವನ್ನು ಸುಧಾರಿಸಬಹುದು. ಕರ್ನಾಟಕವು ರಚನಾತ್ಮಕ ಮತ್ತು ಪಾರದರ್ಶಕ ನೋಂದಣಿ ವ್ಯವಸ್ಥೆಯ ಮೂಲಕ ಮರಣೋತ್ತರ ಅಂಗಾಂಗ ದಾನವನ್ನು ಸುಗಮಗೊಳಿಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಇದರೊಟ್ಟಿಗೆ, ಆಸ್ಪತ್ರೆಗಳು, ವಿಶೇಷವಾಗಿ ಐಸಿಯುಗಳು, ಸಂಭಾವ್ಯದಾನಿಯನ್ನು ಗುರುತಿಸಿದಾಗ ದುರಂತ ಮತ್ತು ಭರವಸೆಯ ನಡುವಿನನಿರ್ಣಾಯಕ ಕೊಂಡಿಯಾಗುತ್ತವೆ ಎಂದು ಅಂಗಾಂಗದಾನದ ಮಹತ್ವವನ್ನು ತಿಳಿಸಿದರು. ಜೊತೆಗೆ, ಅಂಗಾಂಗದಾನದ ಎಲ್ಲಾಕಾರ್ಯವಿಧಾನಗಳನ್ನು ಗರಿಷ್ಠ ಘನತೆ, ಸಹಾನುಭೂತಿ ಮತ್ತು ಮಾನವ ಅಂಗ ಮತ್ತುಅಂಗಾಂಶ ಕಸಿ ಕಾಯಿದೆ (೧೯೯೪, ತಿದ್ದುಪಡಿ ೨೦೧೧)’ ಗೆ ಅನುಗುಣವಾಗಿ ನೈತಿಕತೆ ಮತ್ತು ಕಾನೂನು ಬದ್ಧವಾಗಿ ನಡೆಸಲಾಗುತ್ತದೆ ಎಂದು ವಿವರಿಸಿದರು.
ಕಳೆದ ೨೦೨೫-೨೬ ವೈಟ್ಫೀಲ್ಡ್ ಮಣಿಪಾಲ್ ಆಸ್ಪತ್ರೆಯು ಕೋಲಾರದ ಇಬ್ಬರು ರೋಗಿಗಳಲ್ಲಿ ಯಶಸ್ವಿಯಾಗಿ ಜೀವಂತ ಕಿಡ್ನಿಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ ಎಂದುಡಾ. ಶೆಟ್ಟಿ ಅವರು ಅಂಕಿಅಂಶಗಳನ್ನು ತೆರೆದಿಟ್ಟರು. ಕೆಲವು ವರ್ಷಗಳ ಹಿಂದೆ, ಕೋಲಾರದ ಮೂರು ಕುಟುಂಬಗಳು ಮೃತಪಟ್ಟ ತಮ್ಮ ಪ್ರೀತಿ ಪಾತ್ರರ ಅಂಗಾಂಗಗಳನ್ನು ದಾನಮಾಡಲು ಸಮ್ಮತಿಸಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ಈ ಸಂಖ್ಯೆ ಶೂನ್ಯವಾಗಿದೆ. ಇದು ಅರಿವಿನ ಕೊರತೆಯೇ ಮುಖ್ಯ ಅಡಚಣೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಡಚಣೆಯನ್ನು ಮುಕ್ತಸಂಭಾಷಣೆ- ಸಂವಾದಗಳ ಮೂಲಕ ನಿವಾರಿಸಬಹುದು. ದುಃಖದಕ್ಷಣಗಳಲ್ಲಿ ಅಂಗಾಂಗದಾನಕ್ಕೆ ಸಮ್ಮತಿಸು ವಕುಟುಂಬಗಳು ಜೀವದಾನದ ಶ್ರೇಷ್ಠ ಪರಂಪರೆಯನ್ನು ನಿರ್ಮಿಸುತ್ತಾರೆ ಎಂದು ಅವರು ಅಂಗಾಂಗದಾನದ ಹೆಚ್ಚಳದ ಅಗತ್ಯತೆಯನ್ನು ಒತ್ತಿ ಹೇಳಿದರು. ಅಲ್ಲದೇ, ಸಾರ್ವಜನಿಕರನ್ನು ಅಂಗಾಂಗದಾನಿಗಳಾಗಿ ನೋಂದಾಯಿಸಿಕೊಳ್ಳಲು ಮತ್ತುಜೀವಗಳನ್ನು ಉಳಿಸುವ ಈಮಹತ್ಕಾರ್ಯಕ್ಕೆ ತಮ್ಮ ಬದ್ಧತೆಯನ್ನು ತೋರಿಸಲು ಕರೆ ನೀಡಿದರು.
ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ.ರಾಜೇಶ್ ಮೋಹನ್ ಶೆಟ್ಟಿ ಮಾತನಾಡಿ, ಅಂಗಾಂಗದಾನದಲ್ಲಿನ ಅಸಮತೋಲನವನ್ನು ಬದಲಾಯಿಸುವ ತುರ್ತು ಅಗತ್ಯವನ್ನು ಎತ್ತಿಹಿಡಿದು ಜಾಗತಿಕವಾಗಿ, ಶೇ. ೭೦-೮೦ ರಷ್ಟು ಕಿಡ್ನಿ ಕಸಿಗಳು ಮರಣ ಹೊಂದಿದದಾನಿಗಳಿಂದ ದೊರೆಯುತ್ತವೆ. ಆದರೆ ಭಾರತದಲ್ಲಿಶೇ. ೯೫ ರಷ್ಟು ಕಸಿಗಳು ಜೀವಂತ ದಾನಿಗಳಿಂದ ಬರುತ್ತವೆ. ಭಾರತದಲ್ಲಿ ರೋಗಿಗಳು ಕಸಿಗಾಗಿ ಸರಾಸರಿ ೩-೪ ವರ್ಷಗಳ ಕಾಲ ಕಾಯುತ್ತಾರೆ. ದುರದೃಷ್ಟವಶಾತ್, ಕಾಯುತ್ತಿರುವವರಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಅಂಗದ ದಾನ ದೊರೆಯುತ್ತದೆ. ಇದು ಹೆಚ್ಚಿನ ದಾನಿಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ವೈಟ್ ಫೀಲ್ಡ್ ನ ಮಣಿಪಾಲ್ ಆಸ್ಪತ್ರೆಯು ನಿರಂತರ ಜಾಗೃತಿಯ ಮೂಲಕ ಮರಣೋತ್ತರ ಅಂಗಾಂಗದಾನವನ್ನು ಹೆಚ್ಚಿಸುವ ಗುರಿಯನ್ನಿಟ್ಟುಕೊಂಡಿದೆ. ನಾವು ಮರಣೋತ್ತರ ಅಂಗಾಂಗ ಕಸಿ ಕಾರ್ಯಕ್ರಮಗಳನ್ನು ಅತ್ಯಂತ ಮಹತ್ವ ನೀಡಿ ಜಾರಿಗೊಳಿಸುತ್ತಿದೆ. ಅತ್ಯುತ್ತಮ ಫಲಿತಾಂಶಗಳನ್ನುನೀಡುತ್ತಿರುವ ಎಬಿಒ- ಅಸಾಮರಸ್ಯ (ವಿರುದ್ಧ ರಕ್ತದ ಗುಂಪು) ಕಿಡ್ನಿ ಕಸಿಗಳನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ ಎಂದರು.
ವೈಟ್ ಫೀಲ್ಡ್ ನ ಮಣಿಪಾಲ್ ಆಸ್ಪತ್ರೆಯು ಸಾರ್ವಜನಿಕರು ಮುಂದೆ ಬಂದು ಅಂಗಾಂಗದಾನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ದಾನಿಗಳಾಗಿ ನೋಂದಾಯಿಸಿಕೊಳ್ಳಲು ವಿನಂತಿ ಮಾಡುತ್ತದೆ. ಅಂಗಾಂಗ ಕಸಿಗಾಗಿ ಕಾಯುತ್ತಿರುವ ಸಾವಿರಾರು ಜನರಿಗೆ, ಅರಿವು ಮತ್ತು ಸಿದ್ಧತೆಗಳು ಜೀವ ಮತ್ತು ನಷ್ಟದ ನಡುವೆ ವ್ಯತ್ಯಾಸವನ್ನು ಮಾಡಬಲ್ಲವು. ನಾವು ಸಂಭಾವ್ಯ ದಾನಿಯೊಬ್ಬರನ್ನು ಕಳೆದುಕೊಂಡಾಗ, ಉಳಿಸಬಹುದಾದ ಅನೇಕ ಜೀವಗಳನ್ನು ಸಹ ಕಳೆದುಕೊಳ್ಳುತ್ತೇವೆ ಎಂದು ಡಾ. ಶೆಟ್ಟಿಅವರು ತಿಳಿಸಿದರು.
ಇಂತಹ ಜಾಗೃತಿ ಕಾರ್ಯಕ್ರಮಗಳು, ನಿರಂತರ ಶಿಕ್ಷಣ ಮತ್ತು ಸಹಾನುಭೂತಿ ವಿಧಾನದ ಮೂಲಕ ವೈಟ್ ಫೀಲ್ಡ್ನ ಮಣಿಪಾಲ್ ಆಸ್ಪತ್ರೆಯು ಅಂಗಾಂಗದಾನದ ಸಂಸ್ಕೃತಿಯನ್ನು ಪೋಷಿಸಲು, ದುಃಖವನ್ನು ಔದಾರ್ಯವಾಗಿ ಪರಿವರ್ತಿಸಲು ಮತ್ತು ಜೀವನವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.
ಚಿತ್ರ : ವೈಟ್ ಫೀಲ್ಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆಯು ಮುಂದಾಗಿದೆ ಎಂದು ವೈಟ್ ಫೀಲ್ಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಸಿ ವೈದ್ಯ ಡಾ. ವಿಷ್ಣುವರ್ಧನ್ ಕೋಲಾರ ನಗರದಲ್ಲಿ ನಡೆದ ಸುದಿಗೋಷ್ಟಿಯಲಿ ಬಿ.ಆರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್