ಗ್ರಂಥಾಲಯ ಸಮುದಾಯದ ಜ್ಞಾನ ದೀವಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
ಗದಗ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಒಂದು ಮಂದಿರ ಕಟ್ಟಿಸಿದರೆ ಸಾವಿರ ಬಿಕ್ಷುಕರು ಹುಟ್ಟಿ ಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ. ಗ್ರಂಥಾಲಯವು ಜನರ ಅಭ್ಯುದಯಕ್ಕಾಗಿ ಹುಟ್ಟಿಕೊಂಡಿರುವ ಸಂಸ್ಥೆ
ಫೋಟೋ


ಗದಗ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಒಂದು ಮಂದಿರ ಕಟ್ಟಿಸಿದರೆ ಸಾವಿರ ಬಿಕ್ಷುಕರು ಹುಟ್ಟಿ ಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ. ಗ್ರಂಥಾಲಯವು ಜನರ ಅಭ್ಯುದಯಕ್ಕಾಗಿ ಹುಟ್ಟಿಕೊಂಡಿರುವ ಸಂಸ್ಥೆ, ಅಸಂಖ್ಯಾತ ಪುಸ್ತಕಗಳನ್ನು, ಅಮೂಲ್ಯ ಗ್ರಂಥಗಳನ್ನು ಹೊಂದಿರುವ ಆಲಯವಾಗಿದೆ, ಮನುಷ್ಯನ ದೇಹಕ್ಕೆ, ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಹಾಗೆಯೇ ಮೆದುಳಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕ. ಜ್ಞಾನದ ಬೆಳಕನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ.

ಗ್ರಂಥಾಲಯವು ಜ್ಞಾನ, ಮನರಂಜನೆ, ನೊಂದ ಮನಸ್ಸಿಗೆ ಸಿಗುವ ಸಾಂತ್ವಾನ, ಕುಳಿತಲ್ಲೇ ಜಗವ ಸುತ್ತುವ ವಾಹನ, ವಿಜ್ಞಾನದ ಅನ್ವೇಷಣೆಗಳು, ಮನೋವಿಜ್ಞಾನ, ಇತಿಹಾಸ, ಪುರಾಣ, ತಾಂತ್ರಿಕ ಮತ್ತು ವೈಜ್ಞಾನಿಕ, ನಾಡಿನ ಸಂಸ್ಕೃತಿ ಇನ್ನೂ ನೂರಾರು, ಸಾವಿರಾರೂ ಅಂಶಗಳನ್ನು ಸಮುದಾಯಕ್ಕೆ ಒದಗಿಸುತ್ತದೆ.

ಗ್ರಂಥಾಲಯಗಳು ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲರನ್ನೂ ದೃಷ್ಟಿಕೋನದಲ್ಲಿ ಇರಿಸಿಕೊಂಡು ಈಗಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿ, ಸಮುದಾಯಕ್ಕೆ ಮಾಹಿತಿಯನ್ನು ಒದಗಿಸುತ್ತದೆ.

ನಿರಂತರ ಕಲಿಕೆ, ಏಕಾಗ್ರತೆಯಿಂದ ಓದಲು, ವಿಮರ್ಶೆ, ಚಿಂತನೆ ಮಾಡಲು ಗ್ರಂಥಾಲಯ ಕೇಂದ್ರಬಿಂದುವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಬುದ್ಧಿವಂತಿಕೆ, ಸ್ವತಂತ್ರ ಮನೋಭಾವ, ಭೌತಿಕ ಶಕ್ತಿಯಿಂದ ತನ್ನದೇ ಆದ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಗ್ರಂಥಾಲಯವು ಓದುಗರನ್ನು ಪ್ರೇರೇಪಿಸುತ್ತದೆ.

ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಈಗಿನ ತಾಂತ್ರಿಕ ಯುಗದಲ್ಲಿ ಡಿಜಿಟಲ್, ವೈಫೈ, ಇಂಟರ್‍ನೆಟ್ ಜಗತ್ತಿನಲ್ಲಿ ಮಾಹಿತಿ ಕುಳಿತಲ್ಲೆ ಲಭ್ಯವಾಗುತ್ತದೆ.ಆದಾಗ್ಯೂ ಪುಸ್ತಕ ಓದುವ ಅಭಿರುಚಿಯು ಅನ್ವೇಷಣೆಯ ಮೂಲಕ ಜನರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ವೃದ್ಧಿಸುತ್ತದೆ. ಇದರಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿಬರಹ, ಲೇಖನ ಹಾಗೂ ಗ್ರಂಥಗಳನ್ನು ಗೌರವಿಸಬೇಕು. ಈ ಎಲ್ಲಾ ಕಾರಣಗಳಿಗಾಗಿ ಗ್ರಂಥಾಲಯವು ಅತ್ಯುತ್ತಮ ಸೇವೆಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿದೆ. ಓದುಗರಿಗೆ ಅನೂಕೂಲಿಸಲು ಸ್ವಂತ ಮಾಹಿತಿ ಕೇಂದ್ರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬ ಪ್ರಜೆಯು ಗ್ರಂಥಾಲಯದ ಸದಸ್ಯತ್ವ ನೋಂದಣಿ ಮಾಡಿಸಿಕೊಂಡು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು.

ಸಾರ್ವಜನಿಕ ಓದುಗರಲ್ಲಿ ಗ್ರಂಥಾಲಯದ ಮಹತ್ವವನ್ನು ಮನದಟ್ಟು ಮಾಡಿ, ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಜಿಲ್ಲಾ ಮತ್ತು ಕೇಂದ್ರ ಗ್ರಂಥಾಲಯಗಳಲ್ಲಿ ಪ್ರತಿ ವರ್ಷ ನವೆಂಬರ 14 ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹವನ್ನು ಹಮ್ಮಿಕೊಂಡಿದೆ.

ಗದಗ ಸಹಾಯಕ ಗ್ರಂಥಪಾಲಕರು, ಸಾರ್ವಜನಿಕ ಗ್ರಂಥಾಲಯ ಅಧಿಮಾರಿ‌ ಡಿ.ಎಸ್. ದುರಗಣ್ಣವರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande