ನವೆಂಬರ್ 20ರ ಗುರುವಾರ ಸಂಡೂರಿನಲ್ಲಿ ಗಣಿ ಕಾರ್ಮಿಕರ ಸಮ್ಮೇಳನ
ಬಳ್ಳಾರಿ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಎಐಯುಟಿಯುಸಿಯ ಸಂಯುಕ್ತ ಗಣಿ ಕಾರ್ಮಿಕರ ಸಂಘವು ಸಂಡೂರಿನ ಅಂಬೇಡ್ಕರ್ ಭವನದಲ್ಲಿ ನವೆಂಬರ್ 20ರ ಗುರುವಾರ ಜಿಲ್ಲಾ ಮಟ್ಟದ ಗಣಿ ಕಾರ್ಮಿಕರ ಸಮ್ಮೇಳನವನ್ನು ಏರ್ಪಡಿಸಿದೆ. ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಆರ್. ಸೋಮಶೇಖರಗೌಡ
ನವೆಂಬರ್ 20ರ ಗುರುವಾರ ಸಂಡೂರಿನಲ್ಲಿ ಗಣಿ ಕಾರ್ಮಿಕರ ಸಮ್ಮೇಳನ


ನವೆಂಬರ್ 20ರ ಗುರುವಾರ ಸಂಡೂರಿನಲ್ಲಿ ಗಣಿ ಕಾರ್ಮಿಕರ ಸಮ್ಮೇಳನ


ಬಳ್ಳಾರಿ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಎಐಯುಟಿಯುಸಿಯ ಸಂಯುಕ್ತ ಗಣಿ ಕಾರ್ಮಿಕರ ಸಂಘವು ಸಂಡೂರಿನ ಅಂಬೇಡ್ಕರ್ ಭವನದಲ್ಲಿ ನವೆಂಬರ್ 20ರ ಗುರುವಾರ ಜಿಲ್ಲಾ ಮಟ್ಟದ ಗಣಿ ಕಾರ್ಮಿಕರ ಸಮ್ಮೇಳನವನ್ನು ಏರ್ಪಡಿಸಿದೆ.

ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಆರ್. ಸೋಮಶೇಖರಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಎನ್. ಪ್ರಮೋದ್, ಉಪಾಧ್ಯಕ್ಷರಾದ ಎ. ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್ ಅವರು ಸುದ್ದಿಗಾರರಿಗೆ ಗುರುವಾರ ಈ ಮಾಹಿತಿ ನೀಡಿ, ಸಮ್ಮೇಳನದಲ್ಲಿ ಸಂಡೂರು, ಬಳ್ಳಾರಿ ಹಾಗೂ ಹೊಸಪೇಟೆಯ ಗಣಿ ಕಾರ್ಮಿಕರು ಭಾಗವಹಿಸಲಿದ್ದಾರೆ.

ಸಮ್ಮೇಳನದ ಮುನ್ನ ಬೃಹತ್ ಮೆರವಣಿಗೆಯು ಸಂಡೂರಿನ ಎಪಿಎಂಸಿಯಿಂದ ಪ್ರಾರಂಭವಾಗಿ, ಸಮ್ಮೇಳನದ ಸ್ಥಳದಲ್ಲಿ ಸಮಾರೋಪಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಸಮ್ಮೇಳನದಲ್ಲಿ ಗಣಿ ಕಾರ್ಮಿಕರ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ವಿಸ್ತøತ ಚರ್ಚೆಗಳು ನಡೆಯಲಿವೆ. ಗಣಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸೇವಾಭದ್ರತೆ ನೀಡಬೇಕು. ಗುತ್ತಿಗೆದಾರರು ಬದಲಾದರೂ ಈಗ ಇರುವ ಗುತ್ತಿಗೆ ಕಾರ್ಮಿಕರನ್ನೇ ಕೆಲಸದಲ್ಲಿ ಮುಂದುವರೆಸಬೇಕು. ಕಾಯಂ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಅವರು ತಿಳಿಸಿದರು.

ಕನಿಷ್ಠ ವೇತನ, ರಜೆ, ಬೋನಸ್, ಪಿಎಫ್ ಮುಂತಾದ ಕಾನೂನುಬದ್ಧ ಸೌಲಭ್ಯಗಳನ್ನು ನೀಡಬೇಕು. ಗಣಿಬಾಧಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಸುಸಜ್ಜಿತ ವೆಲ್‍ಫೇರ್ ಆಸ್ಪತ್ರೆ ತೆರೆಯಬೇಕು. ಕೆಎಂಇಆರ್‍ಸಿ ಫಂಡ್‍ನ್ನು ಸಮರ್ಪಕವಾಗಿ ಬಳಸಿ, ಕೆಲಸ ಕಳೆದುಕೊಂಡ ಗಣಿ ಕಾರ್ಮಿಕರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಗಣಿಕಾರ್ಮಿಕರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಮ್ಮೇಳನಕ್ಕೆ ಮುಖ್ಯ ಭಾಷಣಕಾರರಾಗಿ ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್, ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ, ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್.ಎನ್ ಆಗಮಿಸಲಿದ್ದಾರೆ ಎಂದರು.

ಮುಖಂಡರಾದ ಶರ್ಮಾಸ್, ಕಿರಣ್ ಕುಮಾರ್, ಮುರಳಿಕೃಷ್ಣ, ಕೊಟ್ರೇಶ್, ಸುರೇಶ್, ಹೇಮಣ್ಣ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande