ಗೃಹ ಬಂಧನದಲ್ಲಿ ಗಂಡ, ಪತ್ನಿಯ ಕ್ರೂರ ವರ್ತನೆಗೆ ಸ್ಥಳೀಯರ ಆಕ್ರೋಶ
ಗದಗ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗನ ಬೆಟಗೇರಿಯ ಗುಲ್ಬರ್ಗಾ ಓಣಿಯಲ್ಲಿ ಪತ್ನಿಯೇ ಗಂಡನನ್ನು ಮನೆಯಲ್ಲೇ ಗೃಹಬಂಧನದಲ್ಲಿ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಗಜಾನನ ಬಸವಾ ಎಂಬ ನೇಕಾರನನ್ನು ಅವನ ಪತ್ನಿ ಶೋಭಾ ಕಳೆದ 16 ದಿನಗಳಿಂದ ಒಂದು ಕೋಣೆಯಲ್ಲಿ ಬಂಧನದಲ್ಲಿಟ್ಟಿದ್ದಾಳೆ. ಗಜಾನನ ಮತ್ತ
ಫೋಟೋ


ಗದಗ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗನ ಬೆಟಗೇರಿಯ ಗುಲ್ಬರ್ಗಾ ಓಣಿಯಲ್ಲಿ ಪತ್ನಿಯೇ ಗಂಡನನ್ನು ಮನೆಯಲ್ಲೇ ಗೃಹಬಂಧನದಲ್ಲಿ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಗಜಾನನ ಬಸವಾ ಎಂಬ ನೇಕಾರನನ್ನು ಅವನ ಪತ್ನಿ ಶೋಭಾ ಕಳೆದ 16 ದಿನಗಳಿಂದ ಒಂದು ಕೋಣೆಯಲ್ಲಿ ಬಂಧನದಲ್ಲಿಟ್ಟಿದ್ದಾಳೆ.

ಗಜಾನನ ಮತ್ತು ಶೋಭಾ 28 ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಬ್ಬ ಮಗ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ಕಾಲೇಜು ಓದುತ್ತಿದ್ದಾಳೆ. ಗಂಡ ಹೆಂಡತಿ ನಡುವಿನ ಆಸ್ತಿ ಸಂಬಂಧಿತ ಮನಸ್ತಾಪ ವರ್ಷಗಳಿಂದ ಮುಂದುವರಿಯುತ್ತಿದ್ದುದರಿಂದ ಶೋಭಾ ಪತಿಯನ್ನು ಬಿಟ್ಟು ಹೋಗಿದ್ದಳು. ಐದು ವರ್ಷಗಳ ಹಿಂದೆ ಮನೆಗೆ ವಾಪಸ್ ಬಂದ ಬಳಿಕವೂ ಅವರ ಮಧ್ಯೆ ವಿವಾದ ತೀವ್ರಗೊಂಡಿತ್ತು.

ಈ ಹಿಂದೆ ಗಜಾನನ ತನ್ನ ಸಹೋದರಿಯ ಹೆಸರಿಗೆ ಆಸ್ತಿ ನೋಂದಿಸಲು ಮುಂದಾದಾಗಲೂ ತಕರಾರು ಉಂಟಾಗಿ, ಆ ವೇಳೆಯಲ್ಲಿ ಪೊಲೀಸರ ಮಧ್ಯಸ್ಥಿಕೆಯಿಂದ ಮನೆದಲ್ಲಿಯೇ ಇಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಆಸ್ತಿ ವಿಷಯದಲ್ಲಿ ಗಜಾನನ ಮೇಲೆ ಒತ್ತಡ ಹಾಕಿ ಶೋಭಾ ಗೃಹಬಂಧನಕ್ಕೆ ಒಳಪಡಿಸಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದೆ.

ಹೊರಗೆ ಹೋಗದಿದ್ದರೂ, ಹಲವು ದಿನಗಳಿಂದ ಗಜಾನನ ಕೆಲಸಕ್ಕೂ ಕಾಣಿಸದೇ ಇರುವುದರಿಂದ ಸ್ಥಳೀಯರಿಗೆ ಸಂಶಯ ಬಂದು, ಮಾಧ್ಯಮ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಗಜಾನನನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ.

ಗಜಾನನ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿರುವುದರಿಂದ ಆಸ್ತಿಯನ್ನು ಸಹೋದರಿಗೆ ನೀಡಲು ಬಯಸಿದ್ದಾನೆ ಎಂಬ ಕಾರಣಕ್ಕೆ ಪತ್ನಿಯು ಈ ಕೃತ್ಯ ಕೈಗೊಂಡಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದ್ದು, ಪತ್ನಿಯ ಕ್ರೂರ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande