ಕುರೇಕುಪ್ಪ ಪುರಸಭೆ : ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
ಕುರೇಕುಪ್ಪ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಕುರೇಕುಪ್ಪ ಪುರಸಭೆ ಕಾರ್ಯಾಲಯದಿಂದ 2024-25 ನೇ ಸಾಲಿನ ಎಸ್.ಎಫ್.ಸಿ ಅನುದಾನದ ಖರ್ಚಾಗದೇ ಉಳಿದ ಮುಕ್ತ ನಿಧಿಯ ಶೇ.24.10 ಎಸ್‍ಸಿಎಸ್‍ಪಿ ಯೋಜನೆಯಡಿ ಬಿಇ ಮತ್ತು ಎಂಬಿಬಿಎಸ್(ಮೆಡಿಕಲ್) ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲು ಉದ್ದೇಶಿ
ಕುರೇಕುಪ್ಪ ಪುರಸಭೆ : ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ


ಕುರೇಕುಪ್ಪ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಕುರೇಕುಪ್ಪ ಪುರಸಭೆ ಕಾರ್ಯಾಲಯದಿಂದ 2024-25 ನೇ ಸಾಲಿನ ಎಸ್.ಎಫ್.ಸಿ ಅನುದಾನದ ಖರ್ಚಾಗದೇ ಉಳಿದ ಮುಕ್ತ ನಿಧಿಯ ಶೇ.24.10 ಎಸ್‍ಸಿಎಸ್‍ಪಿ ಯೋಜನೆಯಡಿ ಬಿಇ ಮತ್ತು ಎಂಬಿಬಿಎಸ್(ಮೆಡಿಕಲ್) ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲು ಉದ್ದೇಶಿಸಲಾಗಿದ್ದು, ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗಧಿತ ನಮೂನೆ ಅರ್ಜಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವ ಚಿತ್ರ, ಪ್ರಸ್ತಕ ಸಾಲಿನ ಅಂಕ ಪಟ್ಟಿ, ವಿದ್ಯಾಭ್ಯಾಸ ಪ್ರಮಾಣ ಪತ್ರ, ಕಾಲೇಜು ಐಡಿ ಕಾರ್ಡ್ ಲಗತ್ತಿಸಿಬೇಕು. ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಕುರೇಕುಪ್ಪ ಪುರಸಭೆ ಕಚೇರಿಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande