ಕೃಷ್ಣ ಉಕ್ಕುಂದ, ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಕೊಪ್ಪಳ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ಸರ್ಕಾರದ ಅಧಿಸೂಚನೆಯನ್ವಯ ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಚೇರಿಯನ್ನು ಜಂಟಿ ನಿರ್ದೇಶಕರ ಕಚೇರಿಯನ್ನಾಗಿ ಉನ್ನತೀಕರಿಸಿ ಈ ಹುದ್ದೆಗೆ ಕೃಷ್ಣ ಸಿ ಉಕ್ಕುಂದ ಅವರ
ಕೊಪ್ಪಳ - ಕೃಷ್ಣ ಉಕ್ಕುಂದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ


ಕೊಪ್ಪಳ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ಸರ್ಕಾರದ ಅಧಿಸೂಚನೆಯನ್ವಯ ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಚೇರಿಯನ್ನು ಜಂಟಿ ನಿರ್ದೇಶಕರ ಕಚೇರಿಯನ್ನಾಗಿ ಉನ್ನತೀಕರಿಸಿ ಈ ಹುದ್ದೆಗೆ ಕೃಷ್ಣ ಸಿ ಉಕ್ಕುಂದ ಅವರಿಗೆ ಬಡ್ತಿ ನೀಡಲಾಗಿರುತ್ತದೆ.

ಕೃಷ್ಣ ಸಿ ಉಕ್ಕುಂದ ರವರು ನಮ್ಮ ಕೊಪ್ಪಳ ಜಿಲ್ಲೆಗೆ ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷವೂ ಕೊಪ್ಪಳ ಮಾವು ಮೇಳ, ಜೇನು ಹುಳು ಸಾಗಾಣಿಕೆ ಮೇಳ,ಸಸ್ಯಸಂತೆ ರೈತರಿಗೆ ಬೇಕಾಗುವ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಇವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೊಟೇಶ ಬ ಭೂತೆ ವಕೀಲರು ಯಲಬುರ್ಗಾ ಡ್ರಿಪ್ ಇರಿಗೇಶನ್ ಡೀಲರ್ ಇವರು ಸನ್ಮಾನಿಸಿ ಗೌರವಿಸಿದರು.

ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸುಮಾರು 200 ಎಕ್ರೆ, ಪ್ರದೇಶದಲ್ಲಿ ತೋಟಗಾರಿಕಾ ಪಾರ್ಕ್ ಮಾಡಲು ಈಗಾಗಲೇ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು ಮುಂಬರುವ ದಿನಗಳಲ್ಲಿ ಆದಷ್ಟು ಬೇಗನೆ ಈ ಜಿಲ್ಲೆಯ ಜನರಿಗೆ ಇದರ ಸದುಪಯೋಗವಾಗುತ್ತದೆ ಎಂದು ಅವರು ತಿಳಿಸಿದರು ಇಡೀ ದೇಶದಲ್ಲೇ ಹಾಗೂ ವಿಶ್ವದಲ್ಲೇ ನಮ್ಮ ಕೊಪ್ಪಳ ಮಾವು ಕೆಸರ್ ಮಾವು ಮಾದರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೆಂಕನಗೌಡ್ರ ಮೇಟಿ ಪ್ರಗತಿಪರ ರೈತರು ಕೊಪ್ಪಳ,ಮಂಜುನಾಥ ಲಿಂಗಣ್ಣನವರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಸಂತೋಷ ಧರಣಾ ಸಹಾಯಕ ತೋಟಗಾರಿಕಾ ನಿರ್ದೇಶಕರು, ರವೀಂದ್ರನಾಥ ಕೊಟ್ರಪ್ಪ ತೋಟದ ವರದಿಗಾರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande