ನ.17 ರಿಂದ ನ.19 ರವರೆಗೆ ಪರಿಶಿಷ್ಟ ಜಾತಿ ರೈತರಿಗೆ ಉಚಿತ ಕೃಷಿ ತರಬೇತಿ
ಹೊಸಪೇಟೆ, 13 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿಯ ರೈತರು ಮತ್ತು ರೈತ ಮಹಿಳೆಯರಿಗೆ ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನ.17 ರಿಂದ ನ.19 ರವರೆಗೆ ವಿವಿಧ ಕೃಷಿ ಉಪಕರಣಗಳ ದುರಸ್ಥಿ ಹಾಗೂ ನಿರ್ವಹಣೆಯ ಬಗ್ಗೆ 3 ದಿನದ ಸಾಂಸ್ಥಿಕ ತರಬೇತಿಯನ್ನ
ನ.17 ರಿಂದ ನ.19 ರವರೆಗೆ ಪರಿಶಿಷ್ಟ ಜಾತಿ ರೈತರಿಗೆ ಉಚಿತ ಕೃಷಿ ತರಬೇತಿ


ಹೊಸಪೇಟೆ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿಯ ರೈತರು ಮತ್ತು ರೈತ ಮಹಿಳೆಯರಿಗೆ ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನ.17 ರಿಂದ ನ.19 ರವರೆಗೆ ವಿವಿಧ ಕೃಷಿ ಉಪಕರಣಗಳ ದುರಸ್ಥಿ ಹಾಗೂ ನಿರ್ವಹಣೆಯ ಬಗ್ಗೆ 3 ದಿನದ ಸಾಂಸ್ಥಿಕ ತರಬೇತಿಯನ್ನು ಉಚಿತವಾಗಿ ಏರ್ಪಡಿಸಲಿದ್ದು, ತರಬೇತಿದಾರರಿಗೆ ಊಟ ಹಾಗೂ ವಸತಿ ಸೌಕರ್ಯ ಇರುತ್ತದೆ.

ಆದ್ದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು ಕೃಷಿ ತರಬೇತಿಗೆ ಹೆಸರು ನೊಂದಾಯಿಸಲು ಸಹಾಯಕ ಕೃಷಿ ನಿರ್ದೇಶಕರಾದ ವಿದ್ಯಾವತಿ ಹೊಸಮನಿ ಮೊ.7353533138, ಕೃಷಿ ಅಧಿಕಾರಿ ಯೇಸು ಬಾಬು ಮೊ.6360645255 ಹಾಗೂ ಕೃಷಿ ಅಧಿಕಾರಿ ನವ್ಯ ಪ್ರಶಾಂತ ಮೊ.6360139316 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಹೆಸರು ನೊಂದಾಯಿಸಬೇಕೆಂದು ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ವಿದ್ಯಾವತಿ ಹೊಸಮನಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande