ಅಗ್ನಿವೀರ್ ನೇಮಕಾತಿ : 200 ಅಭ್ಯರ್ಥಿಗಳು ಆಯ್ಕೆ
ಸಾಮರ್ಥ್ಯ
ಅಗ್ನಿವೀರ್ ನೇಮಕಾತಿ :  200 ಅಭ್ಯರ್ಥಿಗಳು ಆಯ್ಕೆ


ಅಗ್ನಿವೀರ್ ನೇಮಕಾತಿ :  200 ಅಭ್ಯರ್ಥಿಗಳು ಆಯ್ಕೆ


ಅಗ್ನಿವೀರ್ ನೇಮಕಾತಿ :  200 ಅಭ್ಯರ್ಥಿಗಳು ಆಯ್ಕೆ


ಅಗ್ನಿವೀರ್ ನೇಮಕಾತಿ :  200 ಅಭ್ಯರ್ಥಿಗಳು ಆಯ್ಕೆ


ಅಗ್ನಿವೀರ್ ನೇಮಕಾತಿ :  200 ಅಭ್ಯರ್ಥಿಗಳು ಆಯ್ಕೆ


ಬಳ್ಳಾರಿ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ 14 ಜಿಲ್ಲೆಗಳ ಅಭ್ಯರ್ಥಿಗಳ `ಅಗ್ನಿವೀರ' ಸೇನಾ ನೇಮಕಾತಿ ರ‍್ಯಾಲಿಯು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗಿದ್ದು, ನವೆಂಬರ್ 18ರವರೆಗೆ ನಡೆಯಲಿದೆ. ಮೊದಲ ದಿನ 400 ಅಭ್ಯರ್ಥಿಗಳು ಪಾಲ್ಗೊಂಡಿದ್ದು, 200 ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ತಂಡವು `ಅಗ್ನಿವೀರ' ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪ್ರತಿ ಹಂತದಲ್ಲೂ ಅಭ್ಯರ್ಥಿಗಳ ಮೂಲಭೂತ ಸೌಲಭ್ಯಗಳು, ಊಟ, ವಸತಿ, ಸಾರಿಗೆ ಇನ್ನಿತರೆಗಳ ಮುಂಜಾಗ್ರತೆಯನ್ನು ನಿರ್ವಹಿಸಿದರು.

ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆ ಸೇರಿದಂತೆ ಹಲವು ರೀತಿಯ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 200 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದರು.

ಈ ಸೇನಾ ರ‍್ಯಾಲಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು. ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande