ಗದಗ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 2,10,144 ಹೆಕ್ಟೇರ್ ಪ್ರದೇಶ ಬಿತ್ತನೆ
ಗದಗ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 119.6 ಮಿ.ಮಿ. ವಾಡಿಕೆ ಮಳಿಗೆ 73.3 ಮಿ.ಮಿ. ನಷ್ಟು ವಾಸ್ತವಿಕ ಮಳೆಯಾಗಿರುತ್ತದೆ (ಅಕ್ಟೋಬರ ದಿಂದ 10 ನವ್ಹಂಬರ). ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 257925 ಹೆ. ಪ್ರದೇಶದ ಬಿತ್ತನೆಯಾಗಿದೆ.
ಫೋಟೋ


ಗದಗ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 119.6 ಮಿ.ಮಿ. ವಾಡಿಕೆ ಮಳಿಗೆ 73.3 ಮಿ.ಮಿ. ನಷ್ಟು ವಾಸ್ತವಿಕ ಮಳೆಯಾಗಿರುತ್ತದೆ (ಅಕ್ಟೋಬರ ದಿಂದ 10 ನವ್ಹಂಬರ). ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 257925 ಹೆ. ಪ್ರದೇಶದ ಬಿತ್ತನೆಯಾಗಿದೆ.

ಗದಗ ತಾಲ್ಲೂಕಿನಲ್ಲಿ 52310 ಹೆ.,ಗಜೇಂದ್ರಗಡ 27745 ಹೆ., ಲಕ್ಷ್ಮೇಶ್ವರ 12075 ಹೆ., ಮುಂಡರಗಿ 34750 ಹೆ., ನರಗುಂದ 25520 ಹೆ., ರೋಣ 49021 ಹೆ., ಹಾಗೂಶಿರಹಟ್ಟಿ 8723 ಹೆ. ಪ್ರದೇಶದಂತೆ ಒಟ್ಟು 210144 ಹೆ., (ಶೇ. 81.47) ರಷ್ಟು ಬಿತ್ತನೆಯಾಗಿರುತ್ತದೆ. ದಿನಾಂಕ 11-11-2025 ರಂದು ಜಿಲ್ಲಾಧಿಕಾರಿಗಳು, ಗದಗ ಇವರ ಅಧ್ಯಕ್ಷತೆಯಲ್ಲಿ ರಸಗೊಬ್ಬರಗಳ ಸರಬರಾಜು ಹಾಗೂ ದಾಸ್ತಾನು ಕುರಿತಂತೆ ಸಭೆಯನ್ನು ಜರುಗಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4958 ಮೆ.ಟನ್‌ಯೂರಿಯಾ, 4483 ಮೆ.ಟನ್‌ಡಿ.ಎ.ಪಿ., 915 ಮೆ.ಟನ್. ಎಂ.ಓ.ಪಿ., 304 ಮೆ.ಟನ್. ಎಸ್.ಎಸ್.ಪಿ. ಹಾಗೂ 5558 ಮೆ.ಟನ್. ವಿವಿಧ ಕಾಂಪ್ಲೇಕ್ಸ್ ರಸಗೊಬ್ಬರಗಳು ಸೇರಿದಂತೆ ಒಟ್ಟು 16221 ಮೆ.ಟನ್ ರಸಗೊಬ್ಬರಗಳನ್ನು ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲಿ ದಾಸ್ತಾನು ಇರುತ್ತದೆ. 2025-26 ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ರಸಗೊಬ್ಬರಗಳಿಗೆ ಯಾವುದೇ ಕೊರತೆ ಇರುವುದಿಲ್ಲ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande