
ವಿಜಯಪುರ, 1 ನವೆಂಬರ್ (ಹಿ.ಸ.)
ಆ್ಯಂಕರ್: 1998ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್ನನ್ನು ವಿಜಯಪುರ ದಲ್ಲಿ ಕಳೆದ ಜುಲೈನಲ್ಲಿ ಬಂಧಿಸಲಾಗಿದೆ. ತಮಿಳುನಾಡಿನಿಂದ ತಲೆಮರೆಸಿಕೊಂಡಿದ್ದ ಸಿದ್ದಿಕಿ ರಾಜ್, ವಿಜಯಪುರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಕೊಯಮತ್ತೂರು ಪೊಲೀಸರು ಆತನನ್ನು ಬಂಧಿಸಿದ್ದು, ಕೋಮು ಗಲಭೆ ಮತ್ತು ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 27 ವರ್ಷಗಳ ಬಳಿಕ ಬಂಧಿಸಿ ಆತನ ಬಳಿಯಿಂದ ನಕಲಿ ಆಧಾರ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರದಲ್ಲಿ ನಕಲಿ ದಾಖಲೆ ಸೃಷ್ಡಿಸುವ ಜಾಲ ಇದೆಯಾ ಎಂಬ ಗುಮಾನಿ ಶುರುವಾಗಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರದಲ್ಲಿ ಜುಲೈ ತಿಂಗಳಲ್ಲಿ ಬಂಧಿಸಲಾಗಿದೆ. ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್ನನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದರು.ಸ್ಫೋಟ ಬಳಿಕ ತಮಿಳುನಾಡಿನಿಂದ ಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿ ರಾಜ್ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದನು. ಕೊನೆಗೆ ವಿಜಯಪುರ ನಗರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದನು.ತಮಿಳುನಾಡಿನ ಭಯೋತ್ಪಾದನಾ ನಿಗ್ರಹ ದಳ ಕಳೆದ ಜುಲೈ 9 ರಂದು ವಿಜಯಪುರ ನಗರದಲ್ಲಿ ಟೈಲರ್ ರಾಜಾನನ್ನ ಬಂಧಿಸಿತ್ತು. ಬಳಿಕ ಉಗ್ರ ವಾಸವಿದ್ದ ಮನೆಯನ್ನ ಪರಿಶೀಲನೆ ಮಾಡಲಾಗಿದೆ. ನಗರದ ಇಬ್ರಾಹಿಂ ರೋಜಾ ಏರಿಯಾದಲ್ಲಿನ ಮನೆಯನ್ನ ಪರಿಶೀಲನೆ ನಡೆಸಿದ ತಮಿಳುನಾಡಿನ ಉಗ್ರ ನಿಗ್ರಹ ಪಡೆಯು ಉಗ್ರ ಬಳಸುತ್ತಿದ್ದ ನಕಲಿ ದಾಖಲೆಗಳನ್ನ ಪತ್ತೆ ಮಾಡಿದೆ. ಮನೆ ಸರ್ಚ್ ವೇಳೆ ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ಸಹ ಪತ್ತೆಯಾಗಿವೆ. ಸದ್ಯ ಆ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದೆ.
ಇನ್ನೂ 1998 ರಲ್ಲಿ ತಮಿಳುನಾಡಿನ ಕೊಯಮತ್ತೂರು ಸರಣಿ ಬಾಂಬ್ ಬ್ಲಾಸ್ಟ್‌ನಲ್ಲಿ 58 ಜನರು ಸಾವನ್ನಪ್ಪಿದ್ರು, 250 ಜನ ಗಾಯಗೊಂಡಿದ್ದರು. ಬಾಂಬ್ ಬ್ಲಾಸ್ಟ್ ನಲ್ಲಿ ತಪ್ಪಿಸಿಕೊಂಡು ಹಲವು ರಾಜ್ಯಗಳಲ್ಲಿ ಓಡಾಡಿದ್ದ ಆಸಾಮಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟೇಲರಿಂಗ್ ಕಲಿತು, ಅಲ್ಲಿ ಬೇರೆ ಹೆಸರಿನಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಎನ್ನುವ ಮಾಹಿತಿ ದೊರೆತಿದೆ. 2014ರಲ್ಲಿ ವಿಜಯಪುರಕ್ಕೆ ಬಂದಿದ್ದ ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿಯು ಕರ್ನಾಟಕದ ಹುಬ್ಬಳ್ಳಿ, ಆಲಮೇಲ, ವಿಜಯಪುರ ನಗರದಲ್ಲಿ ಟೀಕಾಣಿ ಹೂಡಿದ್ದ. ವಿಜಯಪುರ ನಗರದ ಎಪಿಎಂಸಿಯಲ್ಲಿ ಹೋಲ್‌ಸೇಲ್ ತರಕಾರಿ ಮಾರಾಟ ಮಾಾಡುತಿದ್ದ ಈತ ಕರ್ನಾಟಕಕ್ಕೆ ಬಂದ ಬಳಿಕ ಶಹಜಾನ್ ಶೇಖ್ ಎಂದು ಹೆಸ್ರು ಬದಲಿಸಿಕೊಂಡಿದ್ದ. ಮಹಾರಾಷ್ಟ್ರದಲ್ಲಿ ಟೈಲರ್ ರಾಜಾ ಎಂದು ಗುರುತಿಸಿಕೊಂಡಿದ್ದ. ಕೊಲ್ಲಾಪುರದಲ್ಲಿ ಟೈಲರಿಂಗ್ ಕಲಿತ ಬಳಿಕ ಟೈಲರ್ ರಾಜಾ ಎಂದು ಹೆಸರು ಬದಲಿಸಿದ್ದ, ಬಳಿಕ ಕರ್ನಾಟಕದ ಹುಬ್ಬಳ್ಳಿ, ಆಲಮೇಲ, ವಿಜಯಪುರದಲ್ಲಿ ಜಹಜಾನ್ ಶೇಖ್ ಹೆಸ್ರಲ್ಲಿ ಟೀಕಾಣಿ ಹೂಡಿದ್ದ. ಈಗ ಆತನ ಬಳಿ ದೊರೆತಿರುವ ನಕಲಿ ದಾಖಲೆಗಳು ಉಗ್ರರ ಹಿಂದೆ ನಕಲಿ ಆಧಾರ್ ಮಾಫಿಯಾ ಇದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನೂ ಉಗ್ರ ಸಿದ್ಧಿಕಿ ರಾಜ್ ಅಲಿಯಾಸ್ ಟೈಲರ್ ರಾಜಾ ಬಾಂಬ್ ಬ್ಲಾಸ್ಟ್ ಬಳಿಕ 1998 ರಿಂದ 2014 ರ ವರೆಗೆ ಹಲವು ರಾಜ್ಯಗಳಲ್ಲಿ ಓಡಾಡಿದ್ದು ಈತ ಹೋದ ರಾಜ್ಯ, ಜಿಲ್ಲೆಗಳಲ್ಲಿ ಹೆಸರು, ಆಧಾರ ಕಾರ್ಡ್ ಬದಲಾಯಿಸಿದ್ದಾರೆ. ಒಟ್ಟಾರೆ, ಎಲ್ಲವೂ ಸರಿ ಇದ್ದ ದಾಖಲೆಗಳಿದ್ದರೂ ಆಧಾರ ಕಾರ್ಡ್ ದೊರೆಯದ ಇಂದಿನ ದಿನಗಳಲ್ಲಿ ಇಂತಹ ಉಗ್ರರಿಗೆ ಯಾವದೇ ದಾಖಲೆ ಇಲ್ಲದೇ ಆಧಾರ ಕಾರ್ಡ್ ದಂತಹ ದಾಖಲೆ ಎಷ್ಟು ಸಲೀಸಾಗಿ ಸಿಗುತ್ತದೆ ಎಂದರೆ ಉಗ್ರರ ರಕ್ಷಣೆಗೆ ಡುಪ್ಲೀಕೇಟ್ ಮಾಫಿಯಾ ಕೆಲಸ ಮಾಡುತ್ತಲಿದೆಯಾ ಎನ್ನುವದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande