ಸ್ಥಬ್ದ ಚಿತ್ರ ಪ್ರದರ್ಶನದಲ್ಲಿ ಎನ್.ಡಬ್ಲು.ಕೆ.ಆರ್.ಟಿ.ಸಿ ಪ್ರಥಮ
ವಿಜಯಪುರ, 01 ನವೆಂಬರ್ (ಹಿ.ಸ.) : ಆ್ಯಂಕರ್ : 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಥಬ್ದಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆಯ ಘಟಕದಿಂದ ತಯಾರಿಸಿದ ಶಕ್ತಿ ಯೋಜನೆಯ ವಿಶ್ವ ದಾಖಲೆಯ ಗರಿ ಎಂಬ ಸ್ಥಬ್ದ ಚಿತ್ರ ಪ್ರಥಮ ಸ್ಥಾನ ಪಡೆದು
ಕರ್ನಾಟಕ


ವಿಜಯಪುರ, 01 ನವೆಂಬರ್ (ಹಿ.ಸ.) :

ಆ್ಯಂಕರ್ : 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಥಬ್ದಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆಯ ಘಟಕದಿಂದ ತಯಾರಿಸಿದ ಶಕ್ತಿ ಯೋಜನೆಯ ವಿಶ್ವ ದಾಖಲೆಯ ಗರಿ ಎಂಬ ಸ್ಥಬ್ದ ಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿತು.

ಜಿಲ್ಲಾಡಳಿತದ ವತಿಯಿಂದ ಶನಿವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ಥಬ್ದ ಚಿತ್ರಗಳ ಪ್ರದರ್ಶನದಲ್ಲಿ 564 ಕೋಟಿ ಟಿಕೇಟ್‍ಗಳನ್ನು ಪಡೆದು ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವುದು, ಬಸ್‍ನಲ್ಲಿ ಮಹಿಳೆಯರು ಪ್ರಯಾಣಿಸುತ್ತಿರುವ ದೃಶ್ಯದ ಜೊತೆಗೆ ಹಂಪಿಯ ಕಲ್ಲಿನ ತೇರು ಹಾಗೂ ನಾನಾ ಕಲೆಗಳನ್ನು ಬಿಂಬಿಸುವ ಸ್ಥಬ್ದಚಿತ್ರ ಇದಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರ ಕಣ್ಮನ ಸೆಳೆದಿತ್ತು.

ಪ್ರತಿ ವರ್ಷವೂ ಎನ್.ಡಬ್ಲುಕೆಎಸ್‍ಆರ್‍ಟಿಸಿಯ ಸ್ಥಬ್ದ ಚಿತ್ರವು ಪ್ರಥಮ ಸ್ಥಾನ ಪಡೆದುಕೊಂಡು ಬರುತ್ತಿದೆ. ಐತಿಹಾಸಿಕ ಮೈಸೂರು ಅರಮನೆ, ಹಂಪಿಯ ಕಲ್ಲಿನ ರಥ, ಬೇಲೂರು ಹಳೆಬೀಡಿನ ಶಿಲ್ಪಕಲೆ, ಮಕ್ಕಳು ಧಿರಿಸದ ಕಿತ್ತೂರ ರಾಣಿ ಚಎನ್ನಮ್ಮ, ಒಣಕೆ ಓಬವ್ವ, ರಾಣಿ ಅಬ್ಬಕ್ಕ ಸೇರಿದಂತೆ ಅನೇಕ ಮಹನೀಯರ ವೇಷ ಭೂಷಣ ಬಿಂಬಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ಥಬ್ದಚಿತ್ರ ದ್ವಿತೀಯ ಸ್ಥಾನ ಪಡೆದರೆ, ಹಿಪ್ಪೆ ನೇರಳೆ ಬೇಸಾಯ ಕ್ರಮಗಳು ಹಾಗೂ ರೇಷ್ಣೆಯಿಂದ ಉತ್ಪಾದಿಸಿದ ನಾನಾ ಉತ್ಪನ್ನಗಳ ಪ್ರದರ್ಶಿಸಿದ ರೇಷ್ಣೆ ಇಲಾಖೆ ಮತ್ತು ತರಕಾರಿಗಳಿಂದ ತಯಾರಿಸಿದ ಪಾತರಗಿತ್ತಿ ಹಾಗೂ ನಾನಾ ಯೋಜನೆಗಳ ಮಾಹಿತಿಯನ್ನೊಳಗೊಂಡ ತೋಟಗಾರಿಕೆ ಇಲಾಖೆಯ ಸ್ಥಬ್ದ ಚಿತ್ರಗಳು ತೃತೀಯ ಸ್ಥಾನವನ್ನು ಪಡೆದುಕೊಂಡವು.

ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡಾಂಬೆಯ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು, ಗೊಂಬೆ ಕುಣಿತ, ನಾನಾ ಇಲಾಖೆಯವರು ತಯಾರಿಸಿದ ಸ್ತಬ್ದ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯು ನವನಗರ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮೂಲಕ ಹೆಸ್ಕಾಂ ಕಚೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಅಂತ್ಯಗೊಂಡಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande