ಹೈಲೋ ಓಪನ್ 2025 ; ಸೆಮಿಫೈನಲ್‌ಗೆ ಉನ್ನತಿ ಹೂಡಾ
ನವದೆಹಲಿ, ,01 ನವೆಂಬರ್ (ಹಿ.ಸ.) : ಆ್ಯಂಕರ್ : ಜರ್ಮನಿಯಲ್ಲಿ ನಡೆಯುತ್ತಿರುವ ಹೈಲೋ ಓಪನ್ 2025 ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಯುವ ಶಟ್ಲರ್ ಉನ್ನತಿ ಹೂಡಾ ಶ್ರೇಷ್ಠ ಪ್ರದರ್ಶನ ನೀಡಿ ಸೆಮಿಫೈನಲ್ ಹಂತ ತಲುಪಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್, ಆಯುಷ್ ಶೆಟ್ಟಿ
Hooda


ನವದೆಹಲಿ, ,01 ನವೆಂಬರ್ (ಹಿ.ಸ.) :

ಆ್ಯಂಕರ್ : ಜರ್ಮನಿಯಲ್ಲಿ ನಡೆಯುತ್ತಿರುವ ಹೈಲೋ ಓಪನ್ 2025 ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಯುವ ಶಟ್ಲರ್ ಉನ್ನತಿ ಹೂಡಾ ಶ್ರೇಷ್ಠ ಪ್ರದರ್ಶನ ನೀಡಿ ಸೆಮಿಫೈನಲ್ ಹಂತ ತಲುಪಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್, ಆಯುಷ್ ಶೆಟ್ಟಿ ಮತ್ತು ಕಿರಣ್ ಜಾರ್ಜ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 18 ವರ್ಷದ ಉನ್ನತಿ ಹೂಡಾ ಅವರು ನಾಲ್ಕನೇ ಶ್ರೇಯಾಂಕದ ಚೈನೀಸ್ ತೈಪೆಯ ಆಟಗಾರ್ತಿ ಲಿನ್ ಹ್ಸಿಯಾಂಗ್ ತಿ ಅವರನ್ನು 22-20, 21-13 ಅಂತರದಲ್ಲಿ ನೇರ ಗೇಮ್‌ಗಳಲ್ಲಿ ಮಣಿಸಿದರು. ಕೇವಲ 47 ನಿಮಿಷಗಳಲ್ಲಿ ಗೆಲುವು ದಾಖಲಿಸಿದ ಉನ್ನತಿ, ಈಗ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋನೇಷ್ಯಾದ ಪುತ್ರಿ ಕುಸುಮಾ ವರ್ದಾನಿ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ, ಮಹಿಳಾ ಸಿಂಗಲ್ಸ್‌ನಲ್ಲೇ ಭಾರತದ ರಕ್ಷಿತಾ ಶ್ರೀ ಸಂತೋಷ್ ರಾಮರಾಜ್ ಅವರು ಡೆನ್ಮಾರ್ಕ್‌ನ ಆರನೇ ಶ್ರೇಯಾಂಕದ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ 7-21, 19-21 ಅಂತರದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು.

ಪುರುಷರ ವಿಭಾಗದಲ್ಲಿ, ಭಾರತದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಇಂಡೋನೇಷ್ಯಾದ ಎದುರಾಳಿಯ ವಿರುದ್ಧ ಕಠಿಣ ಹೋರಾಟ ನಡೆಸಿದರೂ, 17-21, 21-14, 15-21 ಅಂತರದಲ್ಲಿ ಸೋಲು ಕಂಡರು.

ಇದೇ ವೇಳೆ, ಯುವ ಶಟ್ಲರ್ ಆಯುಷ್ ಶೆಟ್ಟಿ ಫಿನ್ಲೆಂಡ್‌ನ ಕಲ್ಲೆ ಕೊಲ್ಜೊನೆನ್ ವಿರುದ್ಧ 21-19, 12-21, 20-22 ಅಂತರದಲ್ಲಿ ಮೂರು ಗೇಮ್‌ಗಳ ರೋಚಕ ಪಂದ್ಯದಲ್ಲಿ ಸೋತರು.

ಕಿರಣ್ ಜಾರ್ಜ್ ಇಂಡೋನೇಷ್ಯಾದ ಎರಡನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ವಿರುದ್ಧ 10-21, 16-21 ಅಂತರದಲ್ಲಿ ಸೋಲು ಕಂಡರು.

ಇದರಿಂದಾಗಿ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಸಂಪೂರ್ಣವಾಗಿ ಅಂತ್ಯಗೊಂಡಿದೆ. ಈಗ ಭಾರತದ ಆಸೆ ಉನ್ನತಿ ಹೂಡಾ ಅವರ ಸೆಮಿಫೈನಲ್ ಪ್ರದರ್ಶನದತ್ತ ಕಾದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande