
ನವದೆಹಲಿ, 1 ನವೆಂಬರ್ (ಹಿ.ಸ.):
ಆ್ಯಂಕರ್:
ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಬದಿಗೊತ್ತಿ ಕೇವಲ ತನ್ನ ಪಂಚ ಭರವಸೆಗಳ ಸುತ್ತವೇ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಹೇಗೆ ಸಂಪೂರ್ಣ ಕುಂಠಿತವಾಗಿದೆ ಎಂಬುದನ್ನು ಇತ್ತೀಚಿನ ಸಿವಿಕ್ ಬೆಂಗಳೂರು ವರದಿ ಬಹಿರಂಗಪಡಿಸಿದೆ ಎಂದು ಉಲ್ಲೇಖಿಸಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿ ಹಳಿ ತಪ್ಪಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದ ನೈಜ ಬೆಳವಣಿಗೆಗೆ ಯಾವುದೇ ದೃಷ್ಟಿಕೋನವಿಲ್ಲದಂತೆ ಆಡಳಿತ ನಡೆಸುತ್ತಿದೆ. ತನ್ನ ಐದು ಭರವಸೆಗಳನ್ನೂ ಸಂಪೂರ್ಣ ಈಡೇರಿಸಲಾಗದೆ ಹೆಣಗಾಡುತ್ತಿದೆ. ಅಲ್ಲದೇ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳುತ್ತಿದೆ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಜನರ ಆರೋಗ್ಯ ರಕ್ಷಣೆ, ಶೈಕ್ಷಣಿಕ ನಿರ್ಲಕ್ಷ್ಯ, ವಿಶ್ವವಿದ್ಯಾಲಯ ಶ್ರೇಯಾಂಕಗಳ ಕುಸಿತ, ಸ್ಥಳೀಯ ಸಂಸ್ಥೆಗಳನ್ನು ಬದಿಗಿಡುವುದು ಮತ್ತು ಹದಗೆಡುತ್ತಿರುವ ಜೀವನ ಪರಿಸ್ಥಿತಿಗಳು ಹಾಗೂ ಅಧ್ಯಯನವು ರಾಜ್ಯದ ಕರಾಳ ಚಿತ್ರಣವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸ್ಪಷ್ಟವಾಗಿ ವಿಫಲವಾಗಿದೆ. ರಾಜ್ಯದ ಅಭಿವೃದ್ಧಿ ತೇರನ್ನು ಹಿಮ್ಮುಖವಾಗಿ ಎಳೆಯುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa