
ಗದಗ, 1 ನವೆಂಬರ್ (ಹಿ.ಸ.):
ಆ್ಯಂಕರ್:
ಕರ್ನಾಟಕ ಏಕೀಕರಣಗೊಂಡು ೬೯ ವರ್ಷಗಳು ಪೂರ್ಣಗೊಂಡಿದ್ದು, ಎಲ್ಲ ಕಡೆ ಸುಖ ಶಾಂತಿ ನೆಲೆಸುವಂತಾಗಲಿ. ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಶಿವರಾಂ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ ಹೀಗೆ ಅನೇಕರು ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಗದಗ ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳುಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿಯೊಬ್ಬರು ದಿನನಿತ್ಯ ವ್ಯವಹಾರ ಮತ್ತು ಚಟುವಟಿಕೆಗಳನಲ್ಲಿ ಹೆಚೆಚ್ಚು ಕನ್ನಡ ಬಳಸುದರೊಂದಿಗೆ ಜನಸಾಮಾನ್ಯರೂ ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕು ಎಂದರು.
ಕನ್ನಡ ನಾಡು-ನುಡಿ, ನೆಲ, ಜಲ, ಸಂಸ್ಕೃತಿ ಬಗೆಗೆ ಹೆಮ್ಮೆ ಮತ್ತು ಕಾಳಜಿ ತೋರಬೇಕು. ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಕನ್ನಡ ನಾಡು ಮುಂಚೂಣಿ ಸ್ಞಾನ ಗಿಟ್ಟಿಸಿಕೊಂಡಿರುವದು ಹೆಮ್ಮೆಯ ತಂದಿದೆ ಎಂದರು.
ಸಮಾರಂಭದಲ್ಲಿ ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ, ವೀರಣ್ಣ ಅಂಗಡಿ, ವೆಂಕಟೇಶ ಆಕಳವಾಡಿ, ಸಾವಿತ್ರ ಮಲ್ಲಾಡದ, ಸೌಮ್ಯ, ಯಂಕಪ್ಪ ಗುಗ್ಗರಿ, ಸಿದ್ಧಲಿಂಗೇಶ ಯಂಡಿಗೇರಿ, ಮಂಜುನಾಥ ಪಾಮೇನಹಳ್ಳಿ, ವಾಣಿ ಮಾಂಡ್ರೆ ಸರೋಜ ಪಟ್ಟಣಶೆಟ್ಟಿ, ವಿದ್ಯಾ ಗದಗ, ಶ್ರೀದೇವಿ ಕಲಕೇರಿ, ಬಸವರಾಜ ಮೊರಬದ, ಜಾಫರ್ ನದಾಫ್, ಉಮೇಶ ಸಂದಿಮನಿ, ರವಿ ಜಾದವ, ಶಿವಕುಮಾರ ಸುಳ್ಳದ,ಶಿವರಾಜ ಕ್ಷತ್ರಿಯವರ, ಕುಮಾರ ಅರಿಸಿದ್ಧಿ ಮತ್ತಿತರರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP