
ವಾಷಿಂಗ್ಟನ್, 01 ನವೆಂಬರ್ (ಹಿ.ಸ.) :
ಆ್ಯಂಕರ್ : ನೈಜೀರಿಯಾದಲ್ಲಿ ಕ್ರಿಶ್ಚಿಯನ್ ಸಮುದಾಯವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳು ಕ್ರಿಶ್ಚಿಯನ್ನರ ವಿರುದ್ಧ ನರಮೇಧ ನಡೆಸುತ್ತಿವೆ ಎಂದು ಹೇಳಿದ ಅವರು, ನೈಜೀರಿಯಾದ ಪರಿಸ್ಥಿತಿಯ ಮೇಲೆ ಅಮೆರಿಕ ವಿಶೇಷ ನಿಗಾ ಇಡುವಂತೆ ಸೂಚಿಸಿದ್ದಾರೆ.
ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ಸಾವಿರಾರು ಕ್ರೈಸ್ತರನ್ನು ಹತ್ಯೆ ಮಾಡಲಾಗುತ್ತಿದೆ, ಅವರ ಧರ್ಮ ಅಸ್ತಿತ್ವದ ಬೆದರಿಕೆಯಲ್ಲಿ ಸಿಲುಕಿದೆ. ಅಮೆರಿಕ ಮೌನವಾಗಿರಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಸಮುದಾಯವನ್ನು ರಕ್ಷಿಸಲು ನಾವು ಸಿದ್ಧರಿದ್ದೇವೆ, ಸಮರ್ಥರಾಗಿದ್ದೇವೆ,” ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ರಂಪ್, ಅಮೆರಿಕ ಕಾಂಗ್ರೆಸ್ಸಿನ ಸದಸ್ಯ ರೈಲಿ ಮೂರ್ ಹಾಗೂ ಸೆನೆಟ್ ಸಮಿತಿ ಅಧ್ಯಕ್ಷ ಟಾಮ್ ಕೋಲ್ ಅವರೊಂದಿಗೆ ಚರ್ಚಿಸಿ, ನೈಜೀರಿಯಾದ ಸ್ಥಿತಿಗತಿ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ನಿರ್ದೇಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa