ಸಮೀಕ್ಷೆ : ಜಿಲ್ಲಾ ಮಟ್ಟದ ಸಹಾಯವಾಣಿ ಆರಂಭ.
ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೊಸಪೇಟೆ ತಾಲೂಕಿನಲ್ಲಿ ಬಹುತೇಕ ಮನೆಗಳ ಗಣತಿ ಪೂರ್ಣಗೊಂಡಿದ್ದು. ಬಾಕಿ ಉಳಿದ ಮನೆಗಳ ಸಮೀಕ್ಷೆಗಾಗಿ ಹತ್ತಿರದ ಸರ್ಕಾರಿ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡ
ಸಮೀಕ್ಷೆ : ಜಿಲ್ಲಾ ಮಟ್ಟದ ಸಹಾಯವಾಣಿ ಆರಂಭ.


ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೊಸಪೇಟೆ ತಾಲೂಕಿನಲ್ಲಿ ಬಹುತೇಕ ಮನೆಗಳ ಗಣತಿ ಪೂರ್ಣಗೊಂಡಿದ್ದು. ಬಾಕಿ ಉಳಿದ ಮನೆಗಳ ಸಮೀಕ್ಷೆಗಾಗಿ ಹತ್ತಿರದ ಸರ್ಕಾರಿ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ತಿಳಿಸಿದ್ದಾರೆ.

ಕೆಲವು ಮನೆಗಳ ಸಮೀಕ್ಷೆ ಆಗದೇ ಬಾಕಿ ಉಳಿದ ಅಂತಹ ಕುಟುಂಬದ ಮನೆಗಳ ಮಾಲೀಕರು ಕಚೇರಿಗಳನ್ನು ಸಂಪರ್ಕಿಸಬಹುದು.

ಸದರಿ ಕಚೇರಿಗಳ ಸಹಾಯವಾಣಿ, ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಅಂತಹ ಮನೆಗಳಿಗೆ ಗಣತಿದಾರರು ಖುದ್ದಾಗಿ ಬಂದು ತಮ್ಮ ಮನೆಗಳ ಸಮೀಕ್ಷೆಯನ್ನು ಮಾಡಿಕೊಂಡು ಹೋಗಲಿದ್ದಾರೆ.

ಹೊಸಪೇಟೆಯ ಕಚೇರಿಗಳು ಮತ್ತು ಸಹಾಯವಾಣಿ ಸಂಖ್ಯೆ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿ, ಮಾರುತಿ ನಿಲಯ, ಪುಣ್ಯಾನಂದಪುರಿ ನಗರ, 35ನೇ ವಾರ್ಡ್, ಆಕಾಶವಾಣಿ ಹೊಸಪೇಟೆ. ಸಹಾಯವಾಣಿ ಸಂಖ್ಯೆ ಮೊ.9742904615, 9448697679, 8147135283, ದೂ.08394-796292.

ತಾಲೂಕು ತಹಶೀಲ್ದಾರರ ಕಾರ್ಯಾಲಯ ಹೊಸಪೇಟೆ. ಸಹಾಯವಾಣಿ ಸಂಖ್ಯೆ ದೂ.08394224208, ಮೊ.9035363608. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಸರ್ವಮಂಗಳ ನಿಲಯ, 6ನೇ ಅಡ್ಡ ರಸ್ತೆ ನೆಹರು ಕಾಲೋನಿ, ಸಹಾಯವಾಣಿ ಸಂಖ್ಯೆ 9590877292, 9986108388 ಕರೆ ಮಾಡಿ ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande