ಬಿಹಾರದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಎನ್‌ಐಎ ದಾಳಿ ; ಶಸ್ತ್ರಾಸ್ತ್ರ ಮತ್ತು ನಗದು ವಶ
ನವದೆಹಲಿ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : 2024ರ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ನಗದು ವಶಪಡಿಸಿಕೊಂಡಿದೆ. ದಾಳಿಯ ವೇಳೆ ಆರೋಪಿ ಸಂದೀಪ್ ಕುಮಾರ್ ಸಿನ್ಹಾ ಅಲ
NIA


ನವದೆಹಲಿ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : 2024ರ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ನಗದು ವಶಪಡಿಸಿಕೊಂಡಿದೆ.

ದಾಳಿಯ ವೇಳೆ ಆರೋಪಿ ಸಂದೀಪ್ ಕುಮಾರ್ ಸಿನ್ಹಾ ಅಲಿಯಾಸ್ ಛೋಟು ಲಾಲ್ ಅವರ ಮನೆಯಿಂದ 9 ಎಂಎಂ ಪಿಸ್ತೂಲ್, 18 ಜೀವಂತ ಕಾರ್ಟ್ರಿಡ್ಜ್‌ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು, 12 ಬೋರ್ ಡಬಲ್ ಬ್ಯಾರೆಲ್ ಗನ್, 35 ಕಾರ್ಟ್ರಿಡ್ಜ್‌ಗಳು ಮತ್ತು ₹4.21 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಸಂದೀಪ್ ಕುಮಾರ್ ಪ್ರಮುಖ ಆರೋಪಿ ವಿಕಾಸ್ ಕುಮಾರ್ನ ಆಪ್ತ ಸಹಚರನಾಗಿದ್ದು, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲದ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮೊದಲಿಗೆ ಬಿಹಾರ ಪೊಲೀಸರು ಎಕೆ-47 ರೈಫಲ್ ಹಾಗೂ ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಆಗಸ್ಟ್ 2024ರಲ್ಲಿ ಈ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.

ನಾಗಾಲ್ಯಾಂಡ್‌ನಿಂದ ಬಿಹಾರದ ವಿವಿಧ ಭಾಗಗಳಿಗೆ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಸುತ್ತಿದ್ದ ಜಾಲದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಕಾಸ್ ಕುಮಾರ್, ಸತ್ಯಂ ಕುಮಾರ್, ದೇವಮಣಿ ರೈ ಅಲಿಯಾಸ್ ಅನೀಶ್ ಮತ್ತು ಮೊಹಮ್ಮದ್ ಅಹ್ಮದ್ ಅನ್ಸಾರಿ ಬಂಧಿತರಾಗಿದ್ದು, ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇತ್ತೀಚೆಗೆ ಮಂಜೂರ್ ಖಾನ್ ಎಂಬ ಇನ್ನೊಬ್ಬ ಆರೋಪಿ ಬಂಧಿತರಾಗಿ ಪಾಟ್ನಾದ ಬೇವೂರ್ ಜೈಲಿನಲ್ಲಿ ಇರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande