ಬಳ್ಳಾರಿ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿರುವ ಬಿ.ಆರ್. ಗವಾಯಿ ಅವರ ಮೇಲೆ `ಶೂ' ಎಸೆದಿರುವ ನ್ಯಾಯವಾದಿಯನ್ನು ತಕ್ಷಣವೇ ಬಂಧಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕವು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಳ್ಳಾರಿ ಜಿಲ್ಲಾ ಘಟಕವು, ಮನುವಾದಿ ವಕೀಲ ಮುಖ್ಯ ನ್ಯಾಯಾಧೀಶರ ಮೇಲೆ `ಶೂ' ಎಸೆದಿರುವುದು ಅಕ್ಷಮ್ಯ ಅಪರಾಧ. ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಇದೇ ಮೊದಲ ಘಟನೆಯಾಗಿದೆ. ಈ ಘಟನೆಯು ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಆಗಿದೆ ಎಂದು ತಿಳಿಸಿದೆ.
ಡಿಎಸ್‍ಎಸ್ ಡಿ.ಜಿ. ಸಾಗರ ಬಣದ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ, ಶೋಷಿತ ಸಮುದಾಯಗಳ ಜಿಲ್ಲಾಧ್ಯಕ್ಷ ಡಾ. ಪಿ.ಎಲ್. ಗಾದಿಲಿಂಗನಗೌಡ, ವಾಲ್ಮೀಕಿ ಸಮಾಜದ ಮುಖಂಡರಾದ ವಿ.ಎಸ್. ಶಿವಶಂಕರ್, ಛಲವಾದಿ ಸಂಘದ ಮುಖಂಡರಾದ ನರಸಪ್ಪ, ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ರಾಮನಾಯ್ಕ್, ಪತ್ರಕರ್ತ ಇಮಾಮ್ ಗೋಡೇಕರ್, ವಕೀಲ ಡಾ. ಟಿ. ದುರುಗಪ್ಪ, ಡಾ. ಕೆ. ಬಸಪ್ಪ, ಸಿದ್ದೇಶ್, ಜಿಲ್ಲಾ ಸಂಚಾಲಕ ಹೆಚ್.ಬಿ. ಗಂಗಪ್ಪ, ಸಂಘಟನಾ ಸಂಚಾಲಕ ದೇವದಾಸ್ ಕೆ., ಹೆಚ್. ಆಂಜನೇಯ, ಬಿ.ರಮೇಶ್, ಮುಖಂಡರುಗಳಾದ ಮಹೇಶ್, ಜಿ. ಪಂಪಾಪತಿ, ಎ. ಮರಿಸ್ವಾಮಿ, ಹೆಚ್. ಮಲ್ಲಪ್ಪ, ಹೆಚ್. ಶಂಕರ್, ಬೆಳಗಲ್ಲು ಹುಲುಗಪ್ಪ, ವಕೀಲರಾದ ಎಂ.ಎಸ್. ಭೀಮಾಶಂಕರ್, ಮಹೇಶ್ ಭತ್ರಿ, ಗಾದಿಲಿಂಗ ಹರಗಿನಡೋಣಿ, ದುರ್ಗದಾಸ್, ಸುರೇಂದ್ರ, ಅಸುಂಡಿ ಶಿವು, ಎತ್ತಿನಬೂದಿಹಾಳ್ ಹನುಮಂತ, ಹಲಕುಂದಿ ಎರ್ರಿಸ್ವಾಮಿ, ಕೃಷ್ಣ ಪುನೀತ್ ಸಂಗನಕಲ್ಲು, ತಿಪ್ಪಯ್ಯ ಸೋಮಸಮುದ್ರ, ಹನುಮಂತ ಕುಡತಿನಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್