ವಿಜಯಪುರ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೈಕ್ ಮತ್ತು ಮಹಿಂದ್ರಾ ವಾಹನ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಬಳಿ ನಡೆದಿದೆ. ರೋಜಾಕ್ ಸಿಕಂದರ್ ಮುಲ್ಲಾ (54), ಅರ್ಷದ ಆಸಿಫ್ ಬೆಪಾರಿ (2) ಮೃತ ದುರ್ದೈವಿಗಳು.
ಮೃತರು ರಬಕವಿ ಬನಹಟ್ಟಿ ತಾಲೂಕಿನ ರಾಂಪುರದವರಾಗಿದ್ದು, ಬನಹಟ್ಟಿಯಿಂದ ಜಮಖಂಡಿ ಕಡೆ ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande