ವಿಜಯಪುರ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಹಿನ್ನೆಲೆ ಭೀಮಾ ನದಿ ಮಹಾಪೂರದಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಕಾಳಜಿ ವಹಿಸಿಲ್ಲ. ಸೂಕ್ತ ಪರಿಹಾರ ಕ್ರಮಗಳನ್ನ ರಾಜ್ಯ ಸರ್ಕಾರ ಕೈಗೊಂಡಿಲ್ಲ. ಮಧ್ಯಪ್ರವೇಶಿಸಿ ಸೂಕ್ತ ತುರ್ತು ಪರಿಹಾರ ಕ್ರಮಗಳನ್ನ ಕೈಗೊಳ್ಳುವಂತೆ ಪ್ರಧಾನಿಗೆ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕದ 117 ಗ್ರಾಮಗಳ, 10 ಸಾವಿರಕ್ಕು ಅಧಿಕ ಜನರು ಪ್ರವಾಹದಿಂದ ಹಾನಿಗೊಳಗಾಗಿದ್ದಾರೆ. 547 ಮನೆಗಳು ಜಲಾವೃತ್ತಗೊಂಡಿವೆ. ಸರ್ಕಾರ ಪ್ರವಾಹ ನಿರ್ವಹಣೆಯನ್ನ ಸರಿಯಾಗಿ ಮಾಡಿಲ್ಲ. ಪ್ರವಾಹ ಪರಿಹಾರ ಕ್ರಮಗಳಿಗಿಂತ ರಾಜಕೀಯದಲ್ಲಿ ರಾಜ್ಯ ಸರ್ಕಾರ ತಲ್ಲೀನವಾಗಿದೆ. ಪ್ರವಾಹ ಅಧ್ಯಯನಕ್ಕಾಗಿ ಕೇಂದ್ರದ ತಂಡ ಕಳುಹಿಸುವಂತೆ ಶಾಸಕ ಯತ್ನಾಳ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande