ಕಂಪ್ಯೂಟರ್ ಸಾಕ್ಷರತೆಯ ಟಿಜಿಟಲ್ ಬಸ್‍ನ ಸದುಪಯೋಗ ಪಡೆಯಿರಿ : ಪ್ರೊ.ಶಿವಾನಂದ ಕೆಳಗಿನಮನಿ
ರಾಯಚೂರು, 05 ಅಕ್ಟೋಬರ್(ಹಿ.ಸ.) : ಆ್ಯಂಕರ್ : ತಂತ್ರಜ್ಞಾನವನ್ನು ಮನೆ ಮನೆಗೂ ತಲುಪಿಸುವ ಮೂಲಕ ಗ್ರಾಮೀಣ ಸಮುದಾಯಗಳಿಗೆ ಡಿಜಿಟಲ್ ಯುಗದಲ್ಲಿ ಬೆಳೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದು ಇದರೊಂದಿಗೆ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುವುದು ಡಿಜಿಟಲ್ ರೂಪಾಂತರ ಬಸ್‍ನ ಮುಖ್ಯ ಗುರಿ
ಕಂಪ್ಯೂಟರ್ ಸಾಕ್ಷರತೆಯ ಟಿಜಿಟಲ್ ಬಸ್‍ನ ಸದುಪಯೋಗ ಪಡೆಯಿರಿ : ಪ್ರೊ.ಶಿವಾನಂದ ಕೆಳಗಿನಮನಿ


ರಾಯಚೂರು, 05 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ತಂತ್ರಜ್ಞಾನವನ್ನು ಮನೆ ಮನೆಗೂ ತಲುಪಿಸುವ ಮೂಲಕ ಗ್ರಾಮೀಣ ಸಮುದಾಯಗಳಿಗೆ ಡಿಜಿಟಲ್ ಯುಗದಲ್ಲಿ ಬೆಳೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದು ಇದರೊಂದಿಗೆ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುವುದು ಡಿಜಿಟಲ್ ರೂಪಾಂತರ ಬಸ್‍ನ ಮುಖ್ಯ ಗುರಿಯಾಗಿರುವುದು ಶ್ಲಾಘನೀಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಹೇಳಿದರು.

ವಾಲ್ಮೀಕಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಡಿಜಿಟಲ್ ರೂಪಾಂತರ ಬಸ್‍ನ ಉದ್ದೇಶವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವಿವಿಯ ಸಿಬ್ಬಂದಿಗೆ ಪರಿಚಯಿಸಲು ಬಹಿರಂಗ ಪ್ರದರ್ಶನ ಏರ್ಪಡಿಸಿದ್ದು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪದವಿ ಶಿಕ್ಷಣ ಪಡೆದು ಕಂಪ್ಯೂಟರ್ ಜ್ಞಾನ ಇಲ್ಲದವರು ಅನಕ್ಷರಸ್ಥರಾಗಿಯೇ ಗುರುತಿಕೊಳ್ಳಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಗ್ರಾಮೀಣ ಸಮುದಾಯಗಳಿಗೆ ಅವರ ಅಂಗಳದಲ್ಲಿಯೇ ಕಂಪ್ಯೂಟರ್ ಶಿಕ್ಷಣ ಒದಗಿಸುತ್ತಿರುವುದು ಒಂದು ಕ್ರಾಂತಿಕಾರಿ ಯೋಜನೆ ಹಾಗೆಯೇ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿಗಳು ಆಸಕ್ತರು ಈ ಬಸ್‍ನ ಹಾಗೂ ಉಚಿತವಾಗಿ ನೀಡಲಾಗುವ ಕೋರ್ಸ್‍ಗಳನ್ನು ಕಲಿತು ಸದುಪಯೋಗ ಪಡೆದುಕೊಳ್ಳಿ ಎಂದು ಕುಲಪತಿಗಳು ಹೇಳಿದರು.

ಡಿಜಿಟಲ್ ರೂಪಾಂತರ ಬಸ್ ಗ್ರಾಮೀಣ ಪ್ರದೇಶದ ಯುವಕರು ಮತ್ತು ಮಕ್ಕಳಿಗೆ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ, ಉದ್ಯಮಶೀಲತೆ, ಐಟಿ ಕೌಶಲ್ಯಗಳನ್ನು ಒದಗಿಸಲು ಎನ್‍ಐಐಟಿ ಫೌಂಡೇಶನ್ ಪ್ರಾರಂಭಿಸಿದೆ. ಭಾರತದಲ್ಲಿ ಒಟ್ಟು 66 ಡಿಜಿಟಲ್ ರೂಪಾಂತರ ಬಸ್‍ಗಳಿದ್ದು, ಒಂದು ಬಸ್ ಕರ್ನಾಟಕಕ್ಕೆ ಆಯ್ಕೆಗೊಂಡಿದ್ದು ಪ್ರಥಮವಾಗಿ ರಾಯಚೂರು ತಾಲೂಕಿಗೆ ಸಮುದಾಯ ಜಾಗೃತಿ ಮತ್ತು ಸಾಮೂಹಿಕ ಸಾಕ್ಷರತಾ ಕಾರ್ಯಕ್ರಮಕ್ಕಾಗಿ ಇಂಡಸ್ ಟವರ್ಸ್ ಲಿಮಿಟೆಡ್ ಮತ್ತು ಸಿಎಸ್‍ಆರ್ ಉಪಕ್ರಮವು ಅವಕಾಶ ನೀಡಿದೆ. ಈ ಬಸ್‍ಗಳು ಸೌರಶಕ್ತಿ-ಚಾಲಿತ, ಎಸಿ, 8ಸಿಸಿ ಕ್ಯಾಮರಾಗಳು, ಪ್ರಿಂಟರ್, 5ಜಿ-ಸಕ್ರಿಯಗೊಂಡ 21 ಕಂಪ್ಯೂಟರ್‍ಗಳು, ಡಿಜಿಟಲ್ ಸ್ಕ್ರೀನ್, ವೈ-ಫೈ ಹೈಸ್ಪೀಡ್ ಇಂಟರ್ನೆಟ್ ಮತ್ತು ಮೊದಲೇ ಸ್ಥಾಪಿಸಲಾದ ಇ-ಕೋರ್ಸ್‍ಗಳನ್ನು ಒಳಗೊಂಡಿರುತ್ತವೆ. ಎಂದು ಡಿಜಿಟಲ್ ರೂಪಾಂತರ ಬಸ್ ಸಿಬ್ಬಂದಿ ಚನ್ನಯ್ಯಸ್ವಾಮಿ ತಿಳಿಸಿದರು.

ಈ ಡಿಜಿಟಲ್ ರೂಪಾಂತರ ಬಸ್ ಎನ್‍ಐಐಟಿ ಫೌಂಡೇಶನ್‍ನಿಂದ ಪ್ರಮಾಣಿಕರಣಗೊಂಡಿದ್ದು, ಅನುಭವಿ ಮತ್ತು ಸಮರ್ಥ ತರಬೇತುದಾರರನ್ನು ಹೊಂದಿದ್ದು, ಉತ್ತಮವಾಗಿ ವಿನ್ಯಾಸಗೊಳಿಸಲಾದ ಅಧ್ಯಯನ ಸಾಮಾಗ್ರಿಗಳು ಮತ್ತು ಈ ಕಲಿಕಾ ಪರಿಕರಗಳು, ಪ್ರಾಯೋಗಿಕಾ ಕಂಪ್ಯೂಟರ್ ಕೌಶಲ್ಯಗಳನ್ನು ಕಲಿಸುವ ಉದ್ದೇಶ ಹೊಂದಿದ್ದು ಗ್ರಾಮಗಳ ಬಾಗಿಲಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ಯೋಜನೆ ಹೊಂದಿದೆ ಮತ್ತು ಈ ಉಚಿತ ಕೋರ್ಸ್ ದಿನಕ್ಕೆ ಒಂದು ತಾಸಿನಂತೆ 21 ದಿನಗಳ ಅವಧಿಯನ್ನು ಹೊಂದಿದ್ದು, ತರಬೇತಿ ಮುಗಿದ ನಂತರ ಕೋರ್ಸ್‍ನ ಪ್ರಮಾಣಪತ್ರ ನೀಡಲಾಗುವುದು. ಎಂದು ಡಿಜಿಟಲ್ ರೂಪಾಂತರ ಬಸ್ ಸಿಬ್ಬಂದಿ ಗಿರೀಶ್ ಕೆ.ಜೆ ತಿಳಿಸಿದರು.

ವಿವಿಯ ಹಣಕಾಸು ಅಧಿಕಾರಿ ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಜಿ.ಎಸ್.ಬಿರಾದಾರ, ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande