ಹೊಸಪೇಟೆ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಡಿವಿಜನಲ್ ರಿಟೇಲ್ ಸೇಲ್ಸ್ ಹೆಡ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಬಳ್ಳಾರಿ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿಯ ಕಮಲಾಪುರ ಗ್ರಾಮದ ಸರ್ವೆ ನಂ.644ಎ2ಎ2ಎ ಮತ್ತು 644ಎ2ಎ2ಬಿ ರ ವಿಸ್ತೀರ್ಣ 0.50 ಮತ್ತು 0.29 ಎಕರೆ ಜಮೀನಿನಲ್ಲಿ 20ಕೆಎಲ್ ಸಾಮಥ್ಯದ ಪೆಟ್ರೋಲಿಯಂ ಕ್ಲಾಸ್ ಎ ಮತ್ತು 20 ಕೆಎಲ್ ಸಾಮಥ್ರ್ಯದ ಪೆಟ್ರೋಲಿಯಂ ಕ್ಲಾಸ್ ಬಿ, ಒಟ್ಟು 40 ಕೆಎಲ್ ಸಾರ್ಮಥ್ಯದ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಪೇಕ್ಷಣ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಮೊಹಮ್ಮದ್ ನಿಜಾಮುದ್ದೀನ್ ತಂದೆ ಇಬ್ರಾಹಿಂ ವಾಸ 202ಎ, ಹನಿ ಮಂಜಿಲ್, ಕಪ್ಪಗಲ್ ರಸ್ತೆ, 5ನೇ ಕ್ರಾಸ್ ಬಳ್ಳಾರಿ ಇವರನ್ನು ಪ್ರಾಂಚೈಸಿಯನ್ನಾಗಿ ನೇಮಕ ಮಾಡಿದ್ದು. ಈ ಜಮೀನಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಹತ್ತು ದಿನದೊಳಗಾಗಿ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ : vijayanagaradc@gmail.com ಅಥವಾ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್