
ಮುಂಬಯಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಸೋತ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸಾ ಹೀಲಿ, ತಂಡದ ಸೋಲಿಗೆ ಸ್ವತಃ ಆಟಗಾರರ ತಪ್ಪುಗಳೇ ಕಾರಣವೆಂದು ಒಪ್ಪಿಕೊಂಡರು.
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಪ್ಪುಗಳಿಂದ ಅವಕಾಶ ಕಳೆದುಕೊಂಡಿದ್ದೇವೆ ಎಂದು ಹೇಳಿದರು. “ಆದರೂ ನಾವು ಹೋರಾಡಿದ್ದೇವೆ, ಆದರೆ ಉತ್ತಮ ತಂಡವೇ ಗೆದ್ದಿತು,” ಎಂದು ಹೀಲಿ ಹೇಳಿದರು.
ಅವರು ಫೀಲ್ಡಿಂಗ್‌ನಲ್ಲಿ ಕೈಬಿಟ್ಟ ಕ್ಯಾಚ್‌ಗಳು ಹಾಗೂ ತಪ್ಪು ನಿರ್ಧಾರಗಳಿಂದ ಸೋಲು ನೋವು ತಂದಿದೆ ಎಂದೂ, ಇದು ತಮ್ಮ ಕೊನೆಯ ಏಕದಿನ ವಿಶ್ವಕಪ್ ಎಂದೂ ಘೋಷಿಸಿದರು. ಭಾರತ 339 ರನ್‌ಗಳ ಗುರಿ ಬೆನ್ನಟ್ಟಿ ಇತಿಹಾಸ ನಿರ್ಮಿಸಿ ಫೈನಲ್‌ಗೆ ತಲುಪಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa