85 ಅಡಿ ಎತ್ತರದ ಶಿವನನ್ನು ಕಣ್ತುಂಬಿಕೊಂಡ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ
ವಿಜಯಪುರ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಹಾಗೂ ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ವಿಜಯಪುರ ನಗರದ ಹೊರವಲಯದಲ್ಲಿ ಇರುವ ಬಸಂತವನಕ್ಕೆ ಭೇಟಿ ನೀಡಿ ಶಿವನ ಮೂರ್ತಿ ದರ್ಶನ ಪಡೆದರು. ಕಾರ್ಯಕ್ರಮ ನಿಮಿತ್ತ ವಿಜಯಪುರ ನಗರಕ್ಕೆ ಆಗಮಿಸಿದ್ದ ಸುಧಾ ಮೂರ್ತಿ ಅವರು ಶಿ
ಶಿವ


ವಿಜಯಪುರ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಹಾಗೂ ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ವಿಜಯಪುರ ನಗರದ ಹೊರವಲಯದಲ್ಲಿ ಇರುವ

ಬಸಂತವನಕ್ಕೆ ಭೇಟಿ ನೀಡಿ ಶಿವನ ಮೂರ್ತಿ ದರ್ಶನ ಪಡೆದರು.

ಕಾರ್ಯಕ್ರಮ ನಿಮಿತ್ತ ವಿಜಯಪುರ ನಗರಕ್ಕೆ ಆಗಮಿಸಿದ್ದ ಸುಧಾ ಮೂರ್ತಿ ಅವರು ಶಿವಗಿರಿಗೆ ಭೇಟಿ ನೀಡಿದರು.

ಈ ವೇಳೆ ಶಿವಗಿರಿಯಲ್ಲಿ ಮಂದಸ್ಮೀತನಾಗಿ ಕುಳಿತಿರುವ 85 ಅಡಿ ಎತ್ತರದ ಶಿವನನ್ನು ಕಣ್ತುಂಬಿಕೊಂಡರು. ಮೂರ್ತಿಯ ನಿರ್ಮಾಣ ಕಾರ್ಯದ ಕುರಿತು ಮಾಹಿತಿ ಪಡೆದರು.

ಬಸಂತವನದಲ್ಲಿ ಸಸ್ಯಕಾಶಿ, ಹಚ್ಚ ಹಸುರಿನ ಸಿರಿ ಕಂಡು ಹರ್ಷ ವ್ಯಕ್ತಪಡಿಸಿದರು. ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ಸುಧಾ ಮೂರ್ತಿಯವರು ಶಿವಗಿರಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿವಗಿರಿಯ ಆರತಿ ಪಾಟೀಲ ಶಿವಗಿರಿ ಟ್ರಸ್ಟ್ ವತಿಯಿಂದ ಅನ್ನ ದಾಸೋಹ, ಪರಿಸರ ರಕ್ಷಣೆ ಹಾಗೂ ಗೋ ರಕ್ಷಣೆಗೆ ಟ್ರಸ್ಟ್ ಹಮ್ಮಿಕೊಂಡು ನಿರ್ವಹಿಸುತ್ತಿರುವ ಕಾರ್ಯಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.

ಮಾಹಿತಿ ಪಡೆದ ಸುಧಾ ಮೂರ್ತಿಯವರು ಶಿವಗಿರಿಯಲ್ಲಿ ಶಿವನ ಪ್ರತಿಮೆಯನ್ನು ಕಂಡು ಸಂತಸವಾಗಿದ್ದು, ಟ್ರಸ್ಟ್ ನಡೆಸುತ್ತಿರುವ ಸೇವಾ ಮನೋಭಾವ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಶಿವಗಿರಿಯ ಅರ್ಚಕ ರುದ್ರಯ್ಯ ಹಿರೇಮಠ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande