ಬಳ್ಳಾರಿ ಪತ್ರಕರ್ತರ ಸಂಘದ ಚುನಾವಣೆ : ಅಂತಿಮ ಕಣದಲ್ಲಿ 37 ಅಭ್ಯರ್ಥಿಗಳು
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ(2025-2028)ಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ (30/10/2025) ದಂದು ಏಳು ನಾಮಪತ್ರ ವಾಪಸ್ಸು ಪಡೆಯಲಾಗಿದ್ದು, ಅಂತಿಮ ಕಣದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಸೇರಿ ಎ
ಬಳ್ಳಾರಿ ಪತ್ರಕರ್ತರ ಸಂಘದ ಚುನಾವಣೆ : ಅಂತಿಮ ಕಣದಲ್ಲಿ 37 ಅಭ್ಯರ್ಥಿಗಳು


ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ(2025-2028)ಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ (30/10/2025) ದಂದು ಏಳು ನಾಮಪತ್ರ ವಾಪಸ್ಸು ಪಡೆಯಲಾಗಿದ್ದು, ಅಂತಿಮ ಕಣದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಸೇರಿ ಎಲ್ಲ 25 ಸ್ಥಾನಗಳಿಗೆ 37 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಾಗರಾಜ್.ಎಸ್ ತಿಳಿಸಿದ್ದಾರೆ.

ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ ವೆಂಕೋಬಿ, ಬಸವರಾಜ್.ಹೆಚ್., ಎಂ.ಜಂಭುನಾಥ.ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎನ್.ವೀರಭದ್ರ ಗೌಡ, ವಿ.ರವಿ. ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಗುರುಶಾಂತ, ಎ.ವಾಗೀಶ್, ಕೆ.ಮಲ್ಲಿಕಾರ್ಜುನ, ಕೆ.ಮಲ್ಲಯ್ಯ, ಬಿ.ರಸೂಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನರಸಿಂಹ ಮೂರ್ತಿ ಕುಲಕರ್ಣಿ, ವೆಂಕಟೇಶ ದೇಸಾಯಿ.

ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದ್ಯಾಮನಗೌಡ ಪಾಟೀಲ್, ಎಂ.ವಿ.ಜೋಷಿ, ಪಿ.ರಘುರಾಂ, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಕೆ.ಅಶೋಕ್, ಬಿ.ಪಂಪನಗೌಡ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸ್ಥಾನಗಳಿಗೆ ಎಸ್.ಕಿನ್ನೂರೇಶ್ವರ, ಕೆ.ವಿರೇಶ್, ಹುಲುಗಣ್ಣ.ಹೆಚ್., ಟಿ.ಈರೇಶ, ನಂದೀಶ್ ಕುಮಾರ್, ಬಿ.ರಮೇಶ್ ಉಪ್ಪಾರ, ಜಿ.ಚಂದ್ರಶೇಖರ ಗೌಡ, ಯು.ಗುರುನಾದಂ, ಎರ್ರಿಸ್ವಾಮಿ.ಬಿ., ಟಿ.ಎನ್.ಶ್ರೀನಿವಾಸ ಶೆಟ್ಟಿ, ರೇಣುಕಾರಾಧ್ಯ.ಕೆ.ಎಂ.ವಿ., ಹೊನ್ನೂರುಸ್ವಾಮಿ, ವಿ.ಹೆಚ್.ಶ್ರೀನಿವಾಸಲು, ಶಿವಾನಂದ ಕೆ.ಮದಿಹಳ್ಳಿ, ಕೆ.ಎಂ.ಮಂಜುನಾಥ, ಪುರುಷೋತ್ತಮ ಹಂದ್ಯಾಳ್, ಶಿವಕುಮಾರ್.ಹೆಚ್., ಅಂಬರೀಶ್.ಎಲ್.ಕೆ., ಜಿ.ಪ್ರವೀಣ್ ರಾಜ್, ಸತೀಶ್.ವಿ ಅಂತಿಮ ಕಣದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande