
ನವದೆಹಲಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ ನಿರ್ಧಾರದಿಂದ ಪ್ರೇರಿತರಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಇಂದು ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿಯೂ ಸ್ಪಷ್ಟವಾಗಿ ಗೋಚರಿಸಿದೆ. ಕಳೆದ ಕೆಲ ದಿನಗಳಿಂದ ಮುಂದುವರಿದಿದ್ದ ಮಾರುಕಟ್ಟೆಯ ಕುಸಿತಕ್ಕೆ ಇಂದು ತಾತ್ಕಾಲಿಕ ತಡೆ ಬಿದ್ದಿದೆ.
ಇಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹1,470 ಏರಿಕೆಯಾಗಿ, ₹1,22,560 ಮಟ್ಟ ತಲುಪಿದೆ. ಬೆಳ್ಳಿಯ ದರವು ಸಹ ಪ್ರತಿ ಕಿಲೋಗ್ರಾಂಗೆ ₹1,200 ಏರಿಕೆಯಾಗಿ, ₹1,52,100 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ.
ದೆಹಲಿಯ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,22,560 ಮತ್ತು 22 ಕ್ಯಾರೆಟ್ ಚಿನ್ನ ₹1,12,360 ದರದಲ್ಲಿ ಮಾರಾಟವಾಗುತ್ತಿದೆ. ಮುಂಬೈಯಲ್ಲಿ ಕ್ರಮವಾಗಿ ₹1,22,410 ಮತ್ತು ₹1,12,210, ಅಹಮದಾಬಾದ್‌ನಲ್ಲಿ ₹1,22,460 ಮತ್ತು ₹1,12,260 ದರಗಳು ದಾಖಲಾಗಿದೆ.
ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿಯೂ ಬೆಲೆ ಏರಿಕೆಯಾಗಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,22,410, 22 ಕ್ಯಾರೆಟ್ ಚಿನ್ನದ ಬೆಲೆ ₹1,12,210 ರಷ್ಟು ದಾಖಲಾಗಿದೆ.
ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ೧,೨೦೦ರಷ್ಟು ಏರಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa