ಆಳ ಬೇರು, ಮರ ಅಮರ, ನಿಸರ್ಗದ ವರ ಪುಸ್ತಕ ಬಿಡುಗಡೆ ಇಂದು
ಬೆಂಗಳೂರು, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದಿವಂಗತ ಪರಮೇಶ್ವರಪ್ಪ ಅವರ ಆತ್ಮಕತೆ ‘ಆಳ ಬೇರು, ಮರ ಅಮರ, ನಿಸರ್ಗದ ವರ’ ಇಂದು ಸಂಜೆ ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಡುಗಡೆಯಾಗಲಿದೆ. ಪರಮೇಶ್ವರಪ್ಪ ಅವರು ತಮ್ಮ ದೀ
Book


ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದಿವಂಗತ ಪರಮೇಶ್ವರಪ್ಪ ಅವರ ಆತ್ಮಕತೆ ‘ಆಳ ಬೇರು, ಮರ ಅಮರ, ನಿಸರ್ಗದ ವರ’ ಇಂದು ಸಂಜೆ ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಡುಗಡೆಯಾಗಲಿದೆ.

ಪರಮೇಶ್ವರಪ್ಪ ಅವರು ತಮ್ಮ ದೀರ್ಘಕಾಲದ ಅರಣ್ಯ ಸೇವೆಯ ಅನುಭವಗಳು, ನಿಸರ್ಗದೊಡನೆ ಹೊಂದಿದ ಆಳವಾದ ನಂಟು ಮತ್ತು ಜೀವನದ ತತ್ವಗಳನ್ನು ದಾಖಲಿಸಿರುವ ಈ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಬಿಡುಗಡೆ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಅವರ ನಿಧನದ ಬಳಿಕ, ಕೃತಿಯ ಬಿಡುಗಡೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮುಂದಾಗಿದ್ದಾರೆ.

ಕಾರ್ಯಕ್ರಮ ಇಂದು ಸಂಜೆ 4.30 ಗಂಟೆಗೆ ಅರಣ್ಯ ಭವನ, ಮಲ್ಲೇಶ್ವರಂ ನಲ್ಲಿ ನಡೆಯಲಿದ್ದು, ಪರಮೇಶ್ವರಪ್ಪ ಅವರ ಪತ್ನಿ ಶ್ರೀಮತಿ ರತ್ನರವರು, ಪರಿಸರವಾದಿ ಹಾಗೂ ನಟ ಸುರೇಶ್ ಹೆಬ್ಳೀಕರ್, ಹಾಗೂ ಪರಮೇಶ್ವರಪ್ಪರ ಆತ್ಮೀಯ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande