ಸಾರಿಗೆ ಅಧಿಕಾರಿಗಳಿಂದ ಅನಧಿಕೃತ ಬಾಡಿಗೆ ದ್ವಿಚಕ್ರ ವಾಹನ ಜಪ್ತಿ
ಹೊಸಪೇಟೆ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಮಲಾಪುರದಲ್ಲಿ ಬೆಂಗಳೂರು ಮೂಲದ ರಾಯಲ್ ಬೈಸನ್ ಕಂಪನಿ ಅವರಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆ ಪಡೆದುಕೊಂಡು ಅನಿಧಿಕೃತವಾಗಿ ಚಾಲಯಿಸುತ್ತಿದ್ದ 3 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗಿದೆ
ಸಾರಿಗೆ ಅಧಿಕಾರಿಗಳಿಂದ ಅನಧಿಕೃತ ಬಾಡಿಗೆ ದ್ವಿಚಕ್ರ ವಾಹನಗಳು ಜಪ್ತು.


ಹೊಸಪೇಟೆ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಮಲಾಪುರದಲ್ಲಿ ಬೆಂಗಳೂರು ಮೂಲದ ರಾಯಲ್ ಬೈಸನ್ ಕಂಪನಿ ಅವರಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆ ಪಡೆದುಕೊಂಡು ಅನಿಧಿಕೃತವಾಗಿ ಚಾಲಯಿಸುತ್ತಿದ್ದ 3 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ತಿಳಿಸಿದ್ದಾರೆ.

ಹಂಪಿ, ಕಮಲಾಪುರ, ಮತ್ತು ಕಡ್ಡಿರಾಂಪುರ ಭಾಗದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತವಾಗಿ ಬಾಡಿಗೆಯ ದ್ವಿಚಕ್ರ ವಾಹನಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಅಕ್ಟೋಬರ್ 27 ರಂದು ಫೆಡ್‍ರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ ಡ್ರೈವರ್ಸ್ ಯುನಿಯನ್ಸ್, ವಿಜಯನಗರ ಆಟೋ ಚಾಲಕರ ಸಂಘದಿಂದ ಹಂಪಿಯಿಂದ ಹೊಸಪೇಟೆಯವರೆಗೆ ಬಾಡಿಗೆಗೆ ದಿಚಕ್ರ ವಾಹನವನ್ನು ಸೇವೆ ನೀಡುವುದಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ನೂರಾರು ಆಟೋ ಚಾಲಕರು ಪ್ರಾದೇಶಿಕ ಸಾರಿಗೆ ಕಚೇರಿವರೆಗೆ ಪ್ರತಿಭಟನೆಯನ್ನು ನಡೆಸಿದ್ದರು.

ಈ ಬಾಡಿಗೆ ವಾಹನಗಳು ಸಂಖ್ಯೆ ಕೆಎ05 ಎಎಲ್6522, ಕೆಎ05 ಎಎಲ್6638 ಸಂಖ್ಯೆಯ ಎರಡು ದ್ವಿಚಕ್ರವಾಹಗಳನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರು ಅಂತಹ ವಾಹನಗಳನ್ನು ತಪಾಸಣೆ ನಡೆಸಿ ಜಪ್ತು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇರಿಸಲಾಗಿದೆ ಮತ್ತು ಬೆಂಗಳೂರು ರಾಯಲ್ ಬೈಸನ್ ಕಂಪನಿಯ ವೈಬ್‍ಸೈಟ್‍ನ್ನು ರದ್ದುಗೊಳಿಸಲಾಗಿದೆ. ಬಾಡಿಗೆ ವಾಹನಗಳು ಅಡಿಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ದ್ವಿಚಕ್ರ ವಾಹನಗಳ ವಿರುದ್ಧ ನಿರಂತರ ತಪಾಸಣೆ ಕಾರ್ಯಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande