
ರಾಯಚೂರು, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನಲ್ಲಿ, ರಾಜ್ಯದ ಹತ್ತಿ ಬೆಳೆಗಾರರಿಂದ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ವತಿಯಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹತ್ತಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.
ಎಫ್.ಎ.ಕ್ಯೂ ಗುಣಮಟ್ಟದ ಹತ್ತಿಯ ಬೆಂಬಲ ಬೆಲೆಯು ಮಧ್ಯಮ ಎಳೆಗೆ ಪ್ರತಿ ಕ್ವಿಂಟಲ್‌ಗೆ 7,710 ರೂ ಮತ್ತು ಉದ್ದನೆಯ ಎಳೆಗೆ ಪ್ರತಿ ಕ್ವಿಂಟಲ್ ಗೆ 8,110 ರೂ ನಿಗದಿಪಡಿಸಲಾಗಿದೆ. ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ಹತ್ತಿ ಬೆಳೆಯುವ ರೈತರ ಹಿತಾಸಕ್ತಿಯಿಂದ ಭಾರತೀಯ ಹತ್ತಿ ನಿಗಮ ನಿಯಮಿತ ಹೊರಡಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನೆ ಪಡೆಯಲು ಜಿಲ್ಲೆಯ ಎಲ್ಲಾ ಹತ್ತಿ ಬೆಳೆಗಾರರು ಸಕಾಲದಲ್ಲಿ ಹೆಸರು ನೋಂದಾಯಿಸಿಕೊಳ್ಳುವAತೆ ಕೋರಲಾಗಿದೆ.
ನೋಂದಣಿ ವಿಧಾನ: 2025-26ನೇ ಸಾಲಿನ ಬೆಂಬಲ ಬೆಲೆ ದರದಲ್ಲಿ ಹತ್ತಿಯನ್ನು (ಕಪಾಸ್) ಮಾರಾಟ ಮಾಡಲು ಗೂಗಲ್ ಪ್ಲೇ ಸ್ಟೋರ ಮತ್ತು ಆ್ಯಪಲ್ ಐಓಎಸ್ ï ನಲ್ಲಿ ಲಭ್ಯವಿರುವ ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು.
ನೋಂದಣಿ ಪ್ರಕ್ರಿಯೆಯ ಹಂತಗಳು: ಮೊದಲು ಭೂ ದಾಖಲೆಗಳು, ಕಂದಾಯ ಪ್ರಾಧಿಕಾರದಿಂದ ಪ್ರಮಾಣೀಕರಿಸಲ್ಪಟ್ಟ ಹತ್ತಿ ಬೆಳೆಯ ದಾಖಲೆಗಳು, ಆಧಾರ್ ಕಾರ್ಡ್ ಮತ್ತು ಫೋಟೊ ಹಾಗೂ ಎಫ್‌ಐಡಿ ಸಂಖ್ಯೆಯ ದಾಖಲೆ ಪುರಾವೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಬಳಿಕ ಕಪಾಸ್ ಕಿಸಾನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ನಿರ್ದಿಷ್ಟ ಅವಧಿಯೊಳಗೆ ಸ್ವಯಂ ನೋಂದಣಿಯನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಗೊಂದಲವಿದ್ದಲ್ಲಿ ಮೊಬೈಲ್ ಸಂಖ್ಯೆ 9611093318, 9449906537, 9632708161, 9513240295, 8861345225, 6362506431, 7619321419ಗೆ ಕರೆ ಮಾಡಿ ವಿಚಾರಿಸಬಹುದಾಗಿದೆ ಎಂದು ಜಿಲ್ಲಾ ಟಾಸ್ಕ್ ಪೋರ್ಸ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್