
ಗದಗ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಅನ್ನ, ನೀರು ಗ್ಯಾಸು ಎಲ್ಲವನ್ನೂ ಕೊಡುತ್ತ ಆರೋಗ್ಯ ಭಾಗ್ಯವನ್ನು ಕೊಟ್ಟಿದ್ದಾರೆ. ಆಯುಷ್ಠಾನ ಭಾರತ ಮತ್ತು ಜನೌಷಧಿ ಕೇಂದ್ರಗಳ ಮೂಲಕ ಬಡವರ. ಆರೋಗ್ಯಕ್ಕೆ ಕೂಡ ಕಾಳಜಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ. ಬೊಮಾಯಿ ಹೇಳಿದರು.
ಇಂದು ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನೂತನ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ ಮಾಡಿದ್ದೇನೆ. ಪಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಕಡು ಬಡವರಿಗೂ ಕೂಡ ಔಷಧಿ ಅತ್ಯಂತ ಅಗ್ಗದ ದರದಲ್ಲಿ ಸಿಗಬೇಕು ಎಂದು 2017 ರಿಂದ ಜನೌಷಧಿ ಕೇಂದ್ರ, ಆರಂಭಿಸಿದ್ದಾರೆ. ಕರ್ನಾಟಕದಲ್ಲಿ 1 ಸಾವಿರಕ್ಕಿಂತ ಹೆಚ್ಚು ಜನ್‌ಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಿಪಿ ಮಾತ್ರೆಗಳು ಹೊರಗಡೆ 50 ರೂ. ಗೆ ದೊರೆತರೆ ಜನೌಷಧಿ ಕೇಂದದಲ್ಲಿ ಕೇವಲ 10 ರೂಪಾಯಿಯಲ್ಲಿ ದೊರೆಯುತ್ತದೆ. ಹೀಗೆ ಬಡವರಿಗೆ ಸಾಕಷ್ಟು ಆರ್ಥಿಕ ತೊಂದರೆ ಇರುತ್ತದೆ. ಅದರಲ್ಲಿ ಆರೋಗ್ಯ ತೊಂದರೆಯಾದರೆ ಔಷಧಿಯ ಭಾರ. ಆಗಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಳಕಳೆಯಿಂದ ಮಾಡಿರುವುದು ಬಡವರಿಗೆ ಸೇವೆ ಆಗುತ್ತಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗೆ ಅನ್ನ ನೀರು ಗ್ರ ಗ್ಯಾಸ್ ಎಲ್ಲವನ್ನೂ ಕೊಡುತ್ತ ಆರೋಗ್ಯ ಭಾಗ್ಯವನ್ನು ಕೊಟ್ಟಿದ್ದಾರೆ. ಆಯುಷ್ಠಾನ ಭಾರತ ಮತ್ತು ಜನೌಷಧಿ ಕೇಂದ್ರಗಳ ಮೂಲಕ ಬಡವರ ಆರೋಗ್ಯಕ್ಕೆ ಕೂಡ ಕಾಳಜಿ ಮಾಡಿದ್ದಾರೆ. ಇದು ನಿಜವಾಗಿಯೂ ಬಡವರ ಬಂಧು ಮೋದಿಯವರ ವ್ಯವಸ್ಥೆ ಬಡವರಿಗೆ ಅನುಕೂಲವಾಗಿದ್ದು, ಇದನ್ನು ಉದ್ಘಾಟನೆ ಮಾಡಲು ಹರ್ಷವಾಗುತ್ತದೆ ಎಂದು ಹೇಳಿದರು
ಈ ಸಂಧರ್ಭದಲ್ಲಿ ಜಿಮ್ಸ್ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಮಾಲಕರಾದ ರಾಮನಗೌಡ ದಾನಪ್ಪಗೌಡ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP