ಸಚಿವ ಎಚ್ ಕೆ ಪಾಟೀಲರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ಗದಗ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಮಂಗಳವಾರ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು. ಸಚಿವರಾದ ಎಚ್ ಕೆ ಪಾಟೀಲ ಅವರಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಹವಾಲು
ಫೋಟೋ


ಗದಗ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಮಂಗಳವಾರ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.

ಸಚಿವರಾದ ಎಚ್ ಕೆ ಪಾಟೀಲ ಅವರಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಹವಾಲು ನೀಡಿದರು. ಅಲ್ಲದೇ ಸಾರ್ವಜನಿಕ ಸಮಸ್ಯೆಗಳ ಕುರಿತು ಹಲವರು ಸಚಿವರ ಗಮನಕ್ಕೆ ತಂದರು.

ಸಾರ್ವಜನಿಕರಿಂದ ಶಾಂತ‌ ಚಿತ್ತದಿಂದಲೇ ಅಹವಾಲುಗಳನ್ನು ಸ್ವೀಕರಿಸಿದ ಸಚಿವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕೂಡಲೆ ಸಮಸ್ಯೆ ಪರಿಹಾರಕ್ಕಾಗಿ ಕ್ರಮ‌ಕೈಗೊಳ್ಳುವಂತೆ ಸೂಚನೇ ನೀಡಿದರು.

ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಅನುದಾನ, ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ ಸೇರಿದಂತೆ ಸಾರ್ವಜನಿಕರಿಂದ ಸಾಮೂಹಿಕ ಹಾಗೂ ವಯಕ್ತಿಕ ಅಹವಾಲುಗಳನ್ನು ಸ್ವೀಕರಿಸಿ ಸಂಭಂದಿಸಿದ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಮಾಡುವಂತೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ.ಪಾಟೀಲ ಅವರು ಸೂಚಿಸಿದರು.

ಸಾರ್ವಜನಿಕರು ಅನಾಯೊಗ್ಯ ಕಾರಣ ಶಸ್ತ್ರಚಿಕಿತ್ಸೆ ಸಹಾಯ ಕೋರಿ ಅಹವಾಲು ತೋಡಿಕೋಂಡರು. ಇದಕ್ಕೆ ಸ್ಪಂದಿಸಿದಂತೆ ಸಚಿವರಾದ ಎಚ್ ಕೆ ಪಾಟೀಲ ಅವರು ಪರಿಹಾರ ನೀಡುವ ಕುರಿತು ಬರವಸೆ ನೀಡಿದರು.

ಸಚಿವ ಎಚ್ ಕೆ ಪಾಟೀಲ ಅವರ ಶಾಂತ, ಸಹಾನುಭೂತಿಪೂರ್ಣ ನಡವಳಿಕೆ ಜನರಲ್ಲಿ ಸಂತೋಷ ಮೂಡಿಸಿ, ಜನನಾಯಕ ಪಾಟೀಲರ ಸ್ಪಂದನಾತ್ಮಕ ಆಡಳಿತ ಎಂದು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರ ಈ ನೇರ ಸಂವಾದಾತ್ಮಕ ಶೈಲಿ ಸಾರ್ವಜನಿಕರಲ್ಲಿ ಸಂತೋಷ ಉಂಟುಮಾಡಿ, “ಜನರ ಅಹವಾಲು ಕೇಳುವ ಜನನಾಯಕನಾದ ಎಚ್‌.ಕೆ. ಪಾಟೀಲರು ನಿಜವಾದ ಸೇವಾ ಮನೋಭಾವ ಇರುವ ವ್ಯಕ್ತಿ” ಎಂಬ ಪ್ರಶಂಸೆ ಎಲ್ಲೆಡೆ ಕೇಳಿಬಂತು.

ಈ ಸಂದರ್ಬದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಾ ಪರಾಪುರ, ಶಕುಂತಲಾ ಅಕ್ಕಿ, ಎಸ್ ಎನ್ ಬಳ್ಳಾರಿ, ದುರಗಪ್ಪ ವಿಭೂತಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಎಸಿ ಗಂಗಪ್ಪ ಎಂ, ಅಧಿಕಾರಿಗಳಾದ ಡಾ. ಎಸ್ ಎಸ್ ನೀಲಗುಂದ, ಬಸನಗೌಡ ಕೊಟೂರ, ರಾಜಾರಾಂ ಪವಾರ, ರುದ್ರಣ್ಣಗೌಡ ಜಿ ಜೆ, ಪದ್ಮಾವತಿ ಜಿ, ರಫೀಕಾ ಹಳ್ಳೂರ, ತಾರಾಮಣಿ ಆರ್, ಶ್ರೀನಿವಾಸ ಮೂರ್ತಿ ಕುಲಕರ್ಣಿ, ಡಾ ಹುಲಗಣ್ಣವರ, ಬಸವರಾಜ ಬಳ್ಳಾರಿ, ಶರಣು ದೊಡ್ಡೂರ, ಎಂ ಎಂ ತುಂಬರಮಟ್ಟಿ, ಮಹಾಂತೇಶ ಕೆ, ರಮೇಶ್, ಅಮೀತ ಬಿದರಿ, ವಸಂತ ಮಡ್ಲೂರ, ಮಲ್ಲಯ್ಯ ಕೆ, ಶಿವಕುಮಾರ ಕುರಿ, ಆರ್ ಎಸ್ ಬುರಡಿ, ಡಾ. ಬಸವರಾಜ ಬೊಮ್ಮನಹಳ್ಳಿ, ಶ್ರೀಧರ ಚಿನಗುಡಿ, ಶಿದ್ದಲಿಂಗ ಮಸಾನಾಯಕ, ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande