
ಗದಗ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ಯಲ್ಲಾಪುರಲ್ಲಿ ಕೆಲವು ತಿಂಗಳುಗಳಿಂದೆ ನಡೆದ ರಾಜಕೀಯ ಸಭೆ ಒಂದರಲ್ಲಿ ಮಾಜಿ ಸಚೀವ ಸಿ.ಟಿ. ರವಿಯವರು ಮೋಸ, ವಂಚನೆ, ಕಳ್ಳತನ ಮತ್ತು ದರೋಡೆಯನ್ನು ತಲೆ ಬೋಳಿಸುವುದಕ್ಕೆ ಹೋಲಿಕೆ ಮಾಡಿ ನಿಂದಿಸಿರುವುದು ಮತ್ತು ಕೇವಲ ನಾಲ್ಕು ದಿನಗಳಿಂದ ವೈದ್ಯಕೀಯ ಕಾಲೇಜಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ನಿಷೇಧಿತ ಪದ ಬಳಿಸಿ ರಾಜ್ಯದ ಸವಿತಾ ಸಮಾಜದ 25 ಲಕ್ಷ ಜನ ಕ್ಷೌರಿಕರನ್ನು ಅಪಮಾನಿಸಿದ್ದು ನಿಜಕ್ಕೂ ಶೋಚನೀಯ ಸಂಗತಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು
ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ಸವಿತಾ ಕ್ಷೌರಿಕ ಸಮಾಜವನ್ನು ಅವಮಾನ ಮಾಡಲೇಬೇಕೇನ್ನುವ ಉದ್ದೇಶದಿಂದ ಇದು ಸತತ್ ವಾಗಿ ಎರಡನೆ ಸಲ ಬುದ್ದಿ ಇಲ್ಲದ ರಾಜಕಾರಣಿ ಬಿ.ಜೆ.ಪಿಯ ಮಾಜಿ ಶಾಸಕ ಸಿ.ಟಿ.ರವಿಯವರು ದೇಶಭಕ್ತನಂತೆ ಪೂಸ್ ಕೂಡುವ ವ್ಯಕ್ತಿ ಈ ಭಾರತ ದೇಶದಲ್ಲಿ ಅವಿಭಾಜ್ಯ ಅಂಗವಾಗಿರುವ ಕ್ಷೌರಿಕ ವೃತಿಯ ಬಗ್ಗೆ ಕೀಳುಭಾವನೆ ಹೋಂದಿರುವ ಈತ ಯಾವ ದೇಶ ಭಕ್ತ. ಈತ ನಿಜಕ್ಕೂ ರಾಜಕೀಯ ನಾಯಕನಾಗುವುದಕ್ಕೆ ನಾಲಯಕ್ ಸೌಂದರ್ಯ ವರ್ದಕಗಳಿಂದ ಟ್ಯಾಕ್ಸ ಕಟ್ಟುತ್ತೆವೆ. ಇಂತಹ ಹಲವಾರು ವೃತ್ತಿಗಳಿಂದ ಬರುವ ಟ್ಯಾಕ್ಸನಿಂದ ಜೀವನ ನೆಡೆಸುವ ಇಂತಹ ರಾಜಕಾರಣಿಗಳು ಅನ್ನ ತಿನ್ನುವ ಬದಲು ಇನ್ನೆನಾದರೂ ತಿನ್ನುತ್ತಾರಾ?. ಇಂತಹ ನಾಲಯಕ್ ರಾಜಕಾರಣಿಯಾದ ಸಿ.ಟಿ.ರವಿಯನ್ನು ಕೂಡಲೆ ವಜಾ ಮಾಡಬೇಕು ಮತ್ತು ಸವಿತಾ ಸಮಾಜದ ವೃತ್ತಿ ಹಾಗೂ ಜಾತಿಯ ಭಾವನೆಗಳನ್ನು ಕೆರಳಿಸಿ ನಿಷೇಧಿತ ಪದ ಬಳಿಸಿ ಅಪಮಾನಗೊಳಿಸಿದ ಸಿ.ಟಿ ರವಿ ಅವರ ವಿರೂದ್ದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ-1860 ಅನ್ವಯ ಜಾತಿನಿಂದನೆ ಆರೋಪದಡಿ ಕ್ರಮ ಜರುಗಿಸಲು ಅನುವಾಗುವಂತೆ ಸರಕಾರವು ಪೊಲೀಸ್ ಇಲಾಖೆ ಮೂಲಕ ಸ್ವಯಂ ಕೇಸ್ ಧಾಕಲಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಕೃಷ್ಣಾ ಎಚ್ ಹಡಪದ ಸರಕಾರಕ್ಕೆ ವಿನಂತಿಸಿದ್ದಾರೆ.
ಇಂತಹ ನೀಚ ರಾಜಕೀಯ ವ್ಯಕ್ತಿಗಳಿಗೆ ನಮ್ಮ ಸವಿತಾ ಸಮಾಜದ ವತಿಯಿಂದ ದಿಕ್ಕಾರವಿರಲಿ ಜವಾಬ್ದಾರಿ ಇಲ್ಲದ ಇಂತವರ ಹೇಳಿಕೆಯಿಂದ ಯಾರ ಹಂಗಿಲ್ಲದೆ ನಿಸ್ವಾರ್ಥದಿಂದ ಸ್ವಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಕ್ಷೌರಿಕ ಸವಿತಾ ಸಮಾಜದ ಕುಲ ಕಾಯಕಕ್ಕೆ ಧಕ್ಕೆ ಉಂಟಾಗಿದೆ ಎಂದು ಕೃಷ್ಣಾ ಎಚ್ ಹಡಪದ ಆಕ್ರೋಶ ವ್ಶಕ್ತ ಪಡಿಸಿದರು
ಸಿ ಟಿ ರವಿಯವರೇ ತಾವು ಸುಂದರವಾಗಿ ಕಾಣುತ್ತಿದ್ದಿರಿ ಅಂದರೆ ಅದಕ್ಕೆ ಸವಿತಾ ಕ್ಷೌರಿಕ ಸಮಾಜ ಕಾರಣ ಅನ್ನೋದು ಮರೆಯಬೇಡಿ ಇದೊಂದು ಪುಣ್ಯದ ಕೆಲಸ , ಕರ್ಮ ಕಳೆಯುವ ಕೆಲಸ ದೇವರಿಗೆ ಹರಕೆಯ ಮುಡಿಯನ್ನು ಕೊಟ್ಟು ಭಕ್ತ ಸಂತುಷ್ಟನಾದ ಕೆಲಸ ಸಿ.ಟಿ ರವಿ ಅವರೇ ತಮ್ಮ ಮನೆಯ ಮಕ್ಕಳಿಗೆ ನಾಮಕರಣ ಮಾಡುವ ಮುಂಚೆ ತಲೆಯನ್ನು ಬೋಳಿಸಿ, ನಂತರ ನಾಮಕರಣ ಮಾಡುತ್ತೀರಾ , ಜನ್ಮದಾತರು ಕಾಲುವಾದಾಗ ಜನ್ಮದ ಕರ್ಮವನ್ನು ಕಳೆಯಲು ತಲೆ ಬೋಳಿಸಿಕೊಳ್ತೀರಾ ತಮ್ಮ ಕಷ್ಟದ ಸಂದರ್ಭದಲ್ಲಿ ದೇವರಿಗೆ ಹರಕೆಯನ್ನು ಹೊತ್ತು ಹರಕೆಯನ್ನು ಸಲ್ಲಿಸುವುದು ಸಾಮಾನ್ಯ ವಿಷಯ ನೀವು ಸಹ ಹರಕೆಯನ್ನು ಸಲ್ಲಿಸಿದವರು ಇದ್ದೀರಾ ಆದರೂ ಸಹ ಇಂಥ ಪುಣ್ಯದ ಕೆಲಸವನ್ನ ನೀಚ ಲಂಪಟ ಮೋಸ ದರೋಡೆಗೆ ಹೋಲಿಕೆ ಮಾಡಿದ್ದು ಮತ್ತು ಜನರ ಮುಂದೆ ದೊಡ್ದಸ್ತಿಕೆ ತೋರಿಸಿಕೊಳ್ಳಲು ಎರಡನೆ ಬಾರಿ ನಿಷೇದಿತ ಪದ ಬಳಿಸುವ ಮೂಲಕ ಸವಿತಾ ಸಮಾಜಕ್ಕೆ ಅವಮಾನ ಮಾಡ್ತಿರೋದು ಎಷ್ಟು ಸರಿ ರೀ ?? ಎಂದು ಪ್ರಸ್ನಿಸಿ ಮಾತನಾಡಿ ತಮ್ಮ ನಾಲಿಗೆ ಬೀಗಿ ಹಿಡಿದು ಬುದ್ದಿವಂತ ರಾಜಕಾರಣಿ ಪದ ಬಳಿಸಿ ಮಾತನಾಡಿ ಎಂದು ಸಲಹೆ ನೀಡಿದರು
ಈ ಕೂಡಲೇ ಮಾಜಿ ಸಚಿವರಾದ ಸಿ.ಟಿ ರವಿಯವರು ರಾಜ್ಯದ ಸವಿತಾ ಸಮಾಜದ ಕ್ಷೌರಿಕರನ್ನ ಕ್ಷಮೆ ಕೇಳಬೇಕಾಗಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹಿರಿಯರಾದ ಹನಮಂತಪ್ಪ ರಾಂಪೂರ ಬಾಲರಾಜ ಕೊಟೇಕಲ್ಲ ದೆವೇಂದ್ರಪ್ಪ ರಾಂಪೂರ ಪರಶುರಾಮ ಕೊಟೇಕಲ್ಲ ರಾಜು ಮಾನೆ ಪಾಂಡು ಕಾಳೆ ವಿಕಾಸ ಕ್ಷೀರಸಾಗರ ಕುರಮುರ್ತಿ ಬಾರಬಾರ ನಾಗರಾಜ ಆರೆಪಲ್ಲಿ ಹನಮಂತ ನಾವ್ಹಿ ವೆಂಕಟೇಶ ನಾವ್ಹಿ ಯಲ್ಲಪ್ಪ ನಾವ್ಹಿ ಗೊವೀಂದರಾಜ ಕರ್ನೂಲ ಶ್ರೀನಿವಾಸ ಕರ್ನೂಲ ಸಂದೀಪ ಬಾಲಗುಡ್ಡ ಅರೂಣ ರಾಂಪೂರ ಪರಶುರಾಮ ಬಳ್ಳಾರಿ ಜಂಮ್ಮಣ್ಣ ಕಡಮೂರ ಹೇಮಂತ ವಡ್ಡೆಪಲ್ಲಿ ಹಾಗೂ ಇತರರು ಆಗ್ರಹಿಸಿ ಒತ್ತಾಯಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / lalita MP