ನಾಳೆ ಹಾಸನ ಜಿಲ್ಲಾ ಯುವಜನೋತ್ಸವ
ಹಾಸನ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ಬೆ.10.30 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಯುವ ಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾಜಿ ಪ್ರಧಾನ ಮಂತ್ರಿಗ
ನಾಳೆ ಹಾಸನ ಜಿಲ್ಲಾ ಯುವಜನೋತ್ಸವ


ಹಾಸನ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ಬೆ.10.30 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಯುವ ಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ಘನ ಉಪಸ್ಥಿತಿವಹಿಸಲಿದ್ದಾರೆ. ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಸ್ಪರ್ಧೆಗಳ ವಿವರ: ಜನಪದ ನೃತ್ಯ (ತಂಡ)(ಕ್ಯಾಸೆಟ್, ಪೆನ್ ಡ್ರೈವ್ ಹಾಗೂ ಸಿಡಿ ಹಾಡುಗಳಿಗೆ ಅವಕಾಶವಿರುವುದಿಲ್ಲ) 10 ಜನರು ಗುಂಪು ಸ್ಪರ್ಧೆ, 15 ನಿಮಿಷ, ಜನಪದ ಗೀತೆ (ತಂಡ) ಕನ್ನಡ ಭಾಷೆ (ಪ್ರಾದೇಶಿಕ ಭಾಷೆ) ಯಲ್ಲಿರಬೇಕು ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತ ಪಡಿಸುವಂತಿಲ್ಲ ಹಾಗೂ ಹಾಡುಗಳ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ. 10 ಜನರು ಗುಂಪು ಸ್ಪರ್ಧೆ

07 ನಿಮಿಷ, ಕಥೆ ಬರೆಯುವುದು : (ವೈಯಕ್ತಿಕ, 1000 ಪದಗಳಿಗೆ ಮೀರದಂತೆ) ಕನ್ನಡ/ಆಂಗ್ಲ/ ಹಿಂದಿ ಭಾಷೆಯಲ್ಲಿರಬೇಕು. 01 ವೈಯುಕ್ತಿಕ ಸ್ಪರ್ಧೆ, 60 ನಿಮಿಷ,

ಚಿತ್ರಕಲೆ : (ವೈಯಕ್ತಿಕ) ಪೋಸ್ಟರ್ 3 Size i.e., 11.7 x 16.5 ಸ್ಪರ್ಧೆಯಲ್ಲಿ ತಮ್ಮ ಚಿತ್ರಕಲೆಯನ್ನು ಸಲ್ಲಿಸುವವರು ಚಿತ್ರಕಲೆಯ ಶೀರ್ಷಿಕೆಯನ್ನು 20-30 ಪದಗಳಲ್ಲಿ ನಮೂದಿಸಬೇಕಾಗುತ್ತದೆ. 01 ವೈಯುಕ್ತಿಕ ಸ್ಪರ್ಧೆ, 90 ನಿಮಿಷ,

ಘೋಷಣೆ: ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಇರಬೇಕು. ಸ್ಪರ್ಧಿಗಳು ಸಿದ್ಧಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 7 ನಿಮಿಷಗಳ ಭಾಷಣ ಮಾಡಬೇಕು. ವಿಷಯ : ಭಾರತದಲ್ಲಿ ತುರ್ತು ಪರಿಸ್ಥಿತಿಯ ಅವಧಿ ಮತ್ತು ಸಂವಿಧಾನದ ಉಲ್ಲಂಘನೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವುದು ಮತ್ತು ಪ್ರಜಾಸತಾತ್ಮಕ ಮೌಲ್ಯಗಳು, 01 ವೈಯುಕ್ತಿಕ ಸ್ಪರ್ಧೆ, 07 ನಿಮಿಷ.

ಕವಿತೆ ಬರೆಯುವುದು (ವೈಯಕ್ತಿಕ) (1000 ಪದಗಳಿಗೆ ಮೀರದಂತೆ) ಕನ್ನಡ (ಪ್ರಾದೇಶಿಕ)/ಆಂಗ್ಲ/ಹಿAದಿ ಭಾಷೆಯಲ್ಲಿರಬೇಕು. 01 ವೈಯುಕ್ತಿಕ ಸ್ಪರ್ಧೆ, 90 ನಿಮಿಷ. ವಿಜ್ಞಾನ ಮೇಳದ ಪ್ರದರ್ಶನ ರಾಜ್ಯ ಮಟ್ಟದವರೆಗೆ ಮಾತ್ರ ಅಯೋಚಿಸಲಾಗುವುದು. 05 ಪ್ರತಿ ಗುಂಪಿಗೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande