ಬೆಳೆ ಹಾನಿ ಪರಿಹಾರ ಪಡೆಯಲು ಎಫ್.ಐ.ಡಿ ಕಡ್ಡಾಯ
ಗದಗ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಸಕ್ತ 2025 ನೇ ಸಾಲಿನ ಅಗಸ್ಟ್ ಮಾಹೆಯಲ್ಲಿ ಗದಗ ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿ ಗದಗ, ಮುಂಡರಗಿ, ನರಗುಂದ, ರೋಣ, ಲಕ್ಷ್ಮೇಶ್ವರ ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಕಟಾವು ಹಂತದಲ್ಲಿದ್ದ ಹೆಸರು,ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ತೋಟಗಾರಿಕೆ ಬೆ
ಫೋಟೋ


ಗದಗ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಸಕ್ತ 2025 ನೇ ಸಾಲಿನ ಅಗಸ್ಟ್ ಮಾಹೆಯಲ್ಲಿ ಗದಗ ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿ ಗದಗ, ಮುಂಡರಗಿ, ನರಗುಂದ, ರೋಣ, ಲಕ್ಷ್ಮೇಶ್ವರ ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಕಟಾವು ಹಂತದಲ್ಲಿದ್ದ ಹೆಸರು,ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿರುತ್ತವೆ. ಈ ಕುರಿತು

ಎನ್.ಡಿ.ಆರ್.ಎಫ್,ಎಸ್.ಡಿಆರ್.ಎಫ್ ಮಾರ್ಗಸೂಚಿಯನ್ವಯ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಂಡು ಒಟ್ಟಾರೆಯಾಗಿ 1,32,586 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ ಎಪ್.ಐ.ಡಿ ಸಂಖ್ಯೆಯನ್ನು ಹೊಂದಿರಬೇಕು ಹಾಗೂ ಎಪ್.ಐ.ಡಿ ಸಂಖ್ಯೆಯೊಂದಿಗೆ ರೈತರು ಹೊಂದಿರುವ ಒಟ್ಟು ಹಿಡುವಳಿ ಪ್ರದೇಶದಎಲ್ಲಾ ಸರ್ವೆ ನಂಬರುಗಳ ವಿವರಗಳನ್ನು ಸೇರಿಸಬೇಕು. ಎಫ್.ಐ.ಡಿ ಹೊಂದಿರು ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ನೇರವಾಗಿರೈತರ ಬ್ಯಾಂಕ ಖಾತೆಗೆ ಡಿಬಿಟಿ ಮುಖಾಂತರ ಪರಿಹಾರದ ಮೊತ್ತಜಮೆ ಮಾಡಲಾಗುವುದು.

ಬೆಳೆ ನಷ್ಟವಾಗಿರುವ ರೈತರು ಬೆಳೆಹಾನಿ ಪರಿಹಾರ ಪಡೆಯಲು ಕಡ್ಡಾಯವಾಗಿ ಎಫ್.ಐ.ಡಿ ಯೊಂದಿಗೆ ತಾವು ಹೊಂದಿರುವ ಎಲ್ಲ ಸಾಗುವಳಿ ಜಮೀನುಗಳನ್ನು ಲಿಂಕ್ ಮಾಡಿಸಬೇಕು.

ಎಫ್.ಐ.ಡಿ ಯಡಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ ವಿಸ್ತೀರ್ಣಗಳನ್ನು ಕೂಡಲೇ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು.

ರೈತರು ಎಫ್.ಐ.ಡಿ ಮಾಡಿಸಿಕೊಳ್ಳಲು ಆಧಾರಕಾರ್ಡ, ಬ್ಯಾಂಕಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವಎಲ್ಲಜಮೀನುಗಳ ಪಹಣಿ, ತಮ್ಮ ಮೋಬೈಲ್ ಸಂಖ್ಯೆ ಹಾಗೂಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ಎಫ್.ಐ.ಡಿ ಮಾಡಿಕೊಳ್ಳಬಹುದಾಗಿದೆ ಹಾಗೂ ಎಫ್.ಐ.ಡಿ.ಗೆ ಸಂಬಂಧಿಸಿದ ವಿವಾದಗಳನ್ನು ಸರಿಪಡಿಸಿಕೊಳ್ಳಲು ದಿನಾಂಕ 31-10-2025 ರೊಳಗಾಗಿ ಸಮೀಪದ ರೈತರ ಸಂಪರ್ಕ ಕೇಂದ್ರ ಹಾಗೂ ಸಹಾಯಕಕೃಷಿ ನಿರ್ದೇಶಕರ ಕಚೇರಿಗಳಿಗೆ ಕೂಡಲೇ ಭೇಟಿ ನೀಡಬೇಕೆಂದು ಎಂದು ಜಂಟಿಕೃಷಿ ನಿರ್ದೇಶಕರು ಜಿಲ್ಲೆಯ ರೈತ ಬಾಂಧವರಲ್ಲಿ ವಿನಂತಿಸಿಕೊಂಡಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande