
ವಿಜಯಪುರ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರದಲ್ಲಿ ಮತ್ತೆ ಸರಣಿ ಭೂಕಂಪನ ಅನುಭವ ಜನತೆಗೆ ಆಗಿದೆ. ವಿಜಯಪುರ ನಗರದ ಸುತ್ತಮುತ್ತ ಎರಡು ಮೂರು ಸೆಕೆಂಡ್ ಕಂಪನದ ಅನುಭವವಾಗಿದ್ದು, ಕಳೆದ ರಾತ್ರಿ 11.59 ಹಾಗೂ 12.38 ನಸುಕಿನ ಜಾವ 5.30ರ ಸುಮಾರಿಗೆ ಭೂಮಿ ನಡುಗಿದ ಅನುಭವ ಆಗಿದೆ.
ಅಲ್ಲದೇ, 3 ರಷ್ಟು ಭೂಕಂಪನದ ತೀವ್ರತೆ ದಾಖಲು ಆಗಿದೆ. ಇನ್ನು
ವಿಜಯಪುರ ನಗರದ ಭವಾನಿ ನಗರ, ಕೀರ್ತಿ ನಗರ, ಗ್ಯಾಂಗ್ ಬೌಡಿ ಭಾಗದಲ್ಲಿ ಕಂಪನ ಆಗಿದೆ. ಸರಣಿ ರೂಪದಲ್ಲಿ ಸಂಭವಿಸುತ್ತಿರುವ ಕಂಪನ ಅನುಭವಕ್ಕೆ ಜನತೆ ಕಂಗಾಲ ಆಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande