
ವಿಜಯಪುರ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಪಘಾತವಾದ ಸ್ಥಿತಿಯಲ್ಲಿ ರಸ್ತೆ ಬದಿನಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ನಡೆದಿದೆ.
ಸಂತೋಷ ಬಿರಾದಾರ (36) ಶವವಾಗಿ ಪತ್ತೆಯಾಗಿರುವ ಗ್ರಾಪ ಸದಸ್ಯ. ತಾರಾಪೂರ ಗ್ರಾಮ ಪಂಚಾಯತಿ ಸದಸ್ಯ ಸಂತೋಷ. ಇನ್ನು ಬೈಕ್ ಮೇಲಿಂದ ಬಿದ್ದ ಸ್ಥಿತಿಯಲ್ಲಿರುವ ಶವ ಸಿಕ್ಕಿದೆ. ತಲೆಗೆ ಏಟು ಬಿದ್ದು ರಕ್ತಸ್ರಾವವಾಗಿರೋ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಆಲಮೇಲ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ತನಿಖೆ ಬಳಿಕ ಇದು ಅಪಘಾತವೋ ಕೊಲೆಯೋ ಎಂಬ ಮಾಹಿತಿ ತಿಳಿದು ಬರಲಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande