
ಗದಗ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದ ವಾಂಬೆ ಬಡಾವಣೆಯ ಒಂದು ಭಾಗದ 76 ಪ್ಲಾಟುಗಳು ಮತ್ತು ಇನ್ನೂಂದು ಭಾಗದ 200 ಪ್ಲಾಟಗಳಿಗೆ ಮಳೆ ನೀರು ನುಗ್ಗದಂತೆ ತಡೆಯಲು ಚರಂಡಿ ಹಾಗೂ ರಾಜಕಾಲುವೆಯ ನಿರ್ಮಾಣ ಕಾಮಗಾರಿಯನ್ನು ರಾಜ್ಯದ ಕಾನೂನು ನ್ಯಾಯ ಹಾಗೂ ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್ ಕೆ ಪಾಟೀಲ್ ರವರು ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ 30 ರಲ್ಲಿ ಚಾಲನೆ ನೀಡಿದರು.
ಸಚಿವರು ಮಾತನಾಡಿ ಮಕ್ಕಳಿಗೆ ಉತ್ತಮಶಿಕ್ಷಣ ನೀಡಲು ಮತ್ತು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ನೋಡಿಕೂಳ್ಳಲು ಸಲಹೆ ನೀಡಿದರು. ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಸಂಬದಿಸಿದ ಅಧಿಕಾರಿಗಳಿಗೆ ಮತ್ತು ಕಾಂಟ್ಯಾಟರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ನಗರಸಭೆ ಪೌರಾಯುಕ್ತರು ರಾಜಾರಾಮ ಪವಾರ, ನಗರಸಭಾ ಸದಸ್ಯರು, ಹಿರಿಯರು, ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP