ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್‍ನಲ್ಲಿ ನೋಂದಾಯಿಸಲು ಸೂಚನೆ
ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸುತ್ತೋಲೆಯಂತೆ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಮುತವಲ್ಲಿಗಳು, ಆಡಳಿತಾಧಿಕಾರಿಗಳು ತಕ್ಷಣವೇ ತಮ್ಮ ವಕ್ಫ್ ಆಸ್ತಿಗಳ ದಾಖಲೆಗಳನ್ನು ಉಮೀದ್ ಪೋರ್ಟಲ್‍ನಲ್ಲಿ ನೋಂದಣಿ ಮಾಡುವಂತೆ ಸೂಚಿಸಿದೆ. UMEED ಪೋರ
ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್‍ನಲ್ಲಿ ನೋಂದಾಯಿಸಲು ಸೂಚನೆ


ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸುತ್ತೋಲೆಯಂತೆ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಮುತವಲ್ಲಿಗಳು, ಆಡಳಿತಾಧಿಕಾರಿಗಳು ತಕ್ಷಣವೇ ತಮ್ಮ ವಕ್ಫ್ ಆಸ್ತಿಗಳ ದಾಖಲೆಗಳನ್ನು ಉಮೀದ್ ಪೋರ್ಟಲ್‍ನಲ್ಲಿ ನೋಂದಣಿ ಮಾಡುವಂತೆ ಸೂಚಿಸಿದೆ.

UMEED ಪೋರ್ಟಲ್ https://umeed.minorityaffairs.gov.in/signin ನಲ್ಲಿ ಮೇಕರ್ ಆಗಿ ನೋಂದಣಿ ಮಾಡಿ, ತಮ್ಮ ಸಂಬಂಧಪಟ್ಟ ವಕ್ಫ್ ಸಂಸ್ಥೆಯ ಎಲ್ಲಾ ವಕ್ಫ್ ಆಸ್ತಿಗಳ ದಾಖಲೆಗಳನ್ನು 30 ದಿನಗಳ ಒಳಗಾಗಿ ಕಡ್ಡಾಯವಾಗಿ ಅಪ್ಲೋಡ್ ಮಾಡಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ವಕ್ಫ್ ಕಚೇರಿಗೆ ಸಂಪರ್ಕಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande