ಹಮ್ ಸಫರ್ ಎಕ್ಸ್ ಪ್ರೆಸ್' ರೈಲು ಕಾಯಂಕುಳಂ ಜಂಕ್ಷನ್’ನಲ್ಲಿ ಪ್ರಾಯೋಗಿಕ ನಿಲುಗಡೆ
ಬೆಂಗಳೂರು, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ತಿರುವನಂತಪುರಂ ನಾರ್ತ್ ಮತ್ತು ಎಸ್ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ಹಮ್ ಸಫರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳಿಗೆ (ಸಂಖ್ಯೆ 16319/16320) ಕಾಯಂಕುಳಂ ಜಂಕ್ಷನ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ನೀಡಲು ದಕ್ಷಿಣ ರೈಲ್ವೆಯು ಸೂಚ
ಹಮ್ ಸಫರ್ ಎಕ್ಸ್ ಪ್ರೆಸ್' ರೈಲು ಕಾಯಂಕುಳಂ ಜಂಕ್ಷನ್’ನಲ್ಲಿ ಪ್ರಾಯೋಗಿಕ ನಿಲುಗಡೆ


ಬೆಂಗಳೂರು, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತಿರುವನಂತಪುರಂ ನಾರ್ತ್ ಮತ್ತು ಎಸ್ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ಹಮ್ ಸಫರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳಿಗೆ (ಸಂಖ್ಯೆ 16319/16320) ಕಾಯಂಕುಳಂ ಜಂಕ್ಷನ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ನೀಡಲು ದಕ್ಷಿಣ ರೈಲ್ವೆಯು ಸೂಚಿಸಿದೆ. ಈ ನಿಲುಗಡೆಯ ಸೌಲಭ್ಯವು ನವೆಂಬರ್ 1, 2025 ರಿಂದ ತಮ್ಮ ಪ್ರಯಾಣವನ್ನು ಆರಂಭಿಸುವ ರೈಲು ಸಂಖ್ಯೆ 16319 (ತಿರುವನಂತಪುರಂ ನಾರ್ತ್–ಎಸ್ಎಂವಿಟಿ ಬೆಂಗಳೂರು) ರೈಲಿಗೆ ಅನ್ವಯವಾಗಲಿದೆ. ಹಾಗೆಯೇ, ವಾಪಸಾತಿ ಮಾರ್ಗದಲ್ಲಿ, ನವೆಂಬರ್ 2, 2025 ರಿಂದ ಪ್ರಯಾಣ ಪ್ರಾರಂಭಿಸುವ ರೈಲು ಸಂಖ್ಯೆ 16320 (ಎಸ್ಎಂವಿಟಿ ಬೆಂಗಳೂರು–ತಿರುವನಂತಪುರಂ ನಾರ್ತ್) ರೈಲಿಗೂ ಸಹ ಅನ್ವಯವಾಗಲಿದೆ.

ಅದರಂತೆ, ರೈಲು ಸಂಖ್ಯೆ 16319 ತಿರುವನಂತಪುರಂ ನಾರ್ತ್ ದಿಂದ ಬೆಂಗಳೂರಿನತ್ತ ಸಾಗುವ ಈ ಹುಮ್ಸಫರ್ ಎಕ್ಸ್ ಪ್ರೆಸ್, ಕಾಯಂಕುಳಂಜಂಕ್ಷನ್’ಗೆ ಸಂಜೆ 7:42 ಗಂಟೆಗೆ ಆಗಮಿಸಿ, ಸಂಜೆ 7:44 ಗಂಟೆಗೆ ಪ್ರಯಾಣ ಮುಂದುವರೆಸಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 16320 ಬೆಂಗಳೂರಿನಿಂದ ತಿರುವನಂತಪುರಂ ನಾರ್ತ್ ಕಡೆಗೆ ಚಲಿಸುವ ಈ ಎಕ್ಸ್ ಪ್ರೆಸ್, ಕಾಯಂಕುಳಂ ಜಂಕ್ಷನ್’ಗೆ ಬೆಳಗ್ಗೆ 7:38 ಗಂಟೆಗೆ ತಲುಪಿ, ಬೆಳಗ್ಗೆ 7:40 ಗಂಟೆಗೆ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande