
ವಿಜಯಪುರ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ೭೪೭ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ೪,೮೨,೮೮೨ ಪಡಿತರ ಚೀಟಿಗಳ ಮೂಲಕ ೧೫,೨೫,೫೮೮ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಜುಲೈ ೨೦೨೩ರಿಂದ ಡಿಸೆಂಬರ್ ೨೦೨೪ರವರೆಗೆ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾದ ೫ ಕೆ.ಜಿ. ಆಹಾರಧಾನ್ಯದ ಬದಲಿಗೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ರೂ.೧೭೦ರಂತೆ ಒಟ್ಟು ರೂ.೩೯೦.೪೪ ಕೋಟಿ ಮೊತ್ತವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಫೆಬ್ರವರಿ ೨೦೨೫ರಿಂದ ನೇರ ನಗದು ವರ್ಗಾವಣೆಯ ಬದಲಿಗೆ ಪ್ರತಿಫಲಾನುಭವಿಗೆ ಕೇಂದ್ರ ಸರ್ಕಾರದ ೫ ಕೆ.ಜಿ. ಧಾನ್ಯಕ್ಕೆ ಸೇರ್ಪಡೆವಾಗಿ ರಾಜ್ಯ ಸರ್ಕಾರದಿಂದ ಇನ್ನೂ ೫ ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande