
ಹೊಸಪೇಟೆ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮೀಕ್ಷೆ ಸಂಬಂಧಿಸಿದಂತೆ ಸಮೀಕ್ಷೆ ಆಗದೆ ಬಾಕಿ ಉಳಿದ ಮನೆಗಳ ಗಣತಿಯನ್ನು ಮಾಡಲು ಅವಧಿಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಬಹುತೇಕ ಮನೆಗಳ ಗಣತಿ ಕಾರ್ಯ ಪೂರ್ಣಗೊಂಡಿರುತ್ತದೆ ಆದರೆ ಇನ್ನೂ ಕೆಲವು ಮನೆಗಳ ಮತ್ತು ಕುಟುಂಬದಲ್ಲಿ ಕೆಲವು ಸದಸ್ಯರನ್ನು ಬಿಟ್ಟು ಹೋಗಿದ್ದಲ್ಲಿ ಅಂತಹ ಕುಟುಂಬದ ಸದಸ್ಯರ ಕುಟುಂಬದ ಸಮೀಕ್ಷೆಯು ಆಗದೆ ಬಾಕಿ ಉಳಿದ ಅಂತಹ ಕುಟುಂಬದ ಮನೆಗಳ ಮಾಲೀಕರು ಸ್ಥಳೀಯ ಕಚೇರಿಗಳ ದೂರವಾಣಿ, ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬೇಕು. ಅಂತಹ ಮನೆಗಳ ಗಣತಿದಾರರು ಖುದ್ದಾಗಿ ಬಂದು ತಮ್ಮ ಮನೆಗಳ ಸಮೀಕ್ಷೆಯನ್ನು ಮಾಡಿಕೊಂಡು ಹೋಗಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮಾರುತಿ ನಿಲಯ, ಪುಣ್ಯಾನಂದಪುರಿ ನಗರ 35ನೇ ವಾರ್ಡ್ ಆಕಾಶವಾಣಿ ಹೊಸಪೇಟೆ. ತಾಲೂಕು ಕಚೇರಿ ತಹಶೀಲ್ದಾರರ ಕಾರ್ಯಾಲಯ ಹೊಸಪೇಟೆ. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ, ಸರ್ವಮಂಗಳ ನಿಲಯ, ಆರನೇ ಅಡ್ಡ ರಸ್ತೆ, ನೆಹರು ಕಾಲೋನಿ, ಹೊಸಪೇಟೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್