
ಕೊಪ್ಪಳ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆ ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯ ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಆಯೋಜಿಸಿದ್ದು, ಪ್ರತಿಭಾನ್ವಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಏಕವ್ಯಕ್ತಿ ಸ್ಪರ್ಧೆಯ ಬಾಲ ಪ್ರತಿಭೆ ಅಥವಾ ಕಿಶೋರ ಪ್ರತಿಭೆ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಜಾನಪದ ಸಂಗೀತ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ) ಹಾಗೂ ಏಕವ್ಯಕ್ತಿ ಸ್ಪರ್ಧೆಯ ಯುವ ಪ್ರತಿಭೆ ವಿಭಾಗದಲ್ಲಿ ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) (7 ನಿಮಿಷ), ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ (7 ನಿಮಿಷ) ಸ್ಪರ್ಧೆಗಳಿರುತ್ತವೆ. ಸಮೂಹ ಸ್ಪರ್ಧೆಯಲ್ಲಿ 45 ನಿಮಿಷಗಳ ನಾಟಕ ಸ್ಪರ್ಧೆ ನಡೆಯಲಿದೆ.
ಆಸಕ್ತ ಬಾಲ ಪ್ರತಿಭೆ(8 ರಿಂದ 14 ವರ್ಷ), ಕಿಶೋರ ಪ್ರತಿಭೆ(14 ರಿಂದ 18 ವರ್ಷ), ಯುವ ಪ್ರತಿಭೆ(18 ರಿಂದ 30 ವರ್ಷ) ವಿಭಾಗದ ಅಭ್ಯರ್ಥಿಗಳು ತಮ್ಮ ಸ್ವವಿವರದ ಪರಿಚಯದ ಪತ್ರ, ವಯಸ್ಸಿನ ದಾಖಲಾತಿ ಮತ್ತು ಭಾಗವಹಿಸುವ ಕಲಾಪ್ರಕಾರ ಸ್ಪಷ್ಟವಾಗಿ ಪತ್ರದಲ್ಲಿ ನಮೂದಿಸಿ ನವೆಂಬರ್ 15 ರ ಸಂಜೆ 5 ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳಕ್ಕೆ ಖುದ್ದಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್