ರಾಷ್ಟ್ರೀಯ ಮೆಣಸಿನಕಾಯಿ ಬೆಳೆ ಸಮ್ಮೇಳನ ; ಎಐಎಚ್ ಲೊಗೋ ಬಿಡುಗಡೆ
ವಿಜಯಪುರ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರೈತರು ವೈಜ್ಞಾನಿಕ ಪದ್ದತಿಯಲ್ಲಿ ಮೆಣಸಿನಕಾಯಿ ಬೆಳೆಯಲು ಮುಂದಾಗಬೇಕು. ಅಂದಾಗ ಮಾತ್ರ ಹೆಚ್ಚಿನ ಇಳುವಳಿ ಪಡೆಯುವದಲ್ಲದೇ ಉತ್ತಮ ಬೆಲೆ ಸಿಗಲು ಸಾಧ್ಯವಾಗಲಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಹೇಳಿದರು. ಬಾಗಲಕೋಟೆ ತೋ
ಮೆಣಸಿನಕಾಯಿ


ವಿಜಯಪುರ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರೈತರು ವೈಜ್ಞಾನಿಕ ಪದ್ದತಿಯಲ್ಲಿ ಮೆಣಸಿನಕಾಯಿ ಬೆಳೆಯಲು ಮುಂದಾಗಬೇಕು. ಅಂದಾಗ ಮಾತ್ರ ಹೆಚ್ಚಿನ ಇಳುವಳಿ ಪಡೆಯುವದಲ್ಲದೇ ಉತ್ತಮ ಬೆಲೆ ಸಿಗಲು ಸಾಧ್ಯವಾಗಲಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಹೇಳಿದರು. ಬಾಗಲಕೋಟೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ತೋಟಗಾರಿಕೆ ಅಕಾಡೆಮಿ, ಅಡ್ವಾನ್ಸಡ್ ಟ್ರೇನಿಂಗ್ ಇನ್ ಪ್ಲಾಂಟ್ ಬ್ರೀಡಿಂಗ್ ಸಹಯೋಗದಲ್ಲಿ ಹಮ್ಮಿಕೊಂಡ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ಪಾದನೆ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಮೊದಲು ಗುಣಮಟ್ಟದ ಬೀಜ ಮಾರುಕಟ್ಟೆಯಲ್ಲಿ ಲಭ್ಯವಾಗಬೇಕು. ರೈತರು ಸಹ ಗುಣಮಟ್ಟದ ಬೀಜವನ್ನು ಖರೀದಿಸುವತ್ತ ಗಮನಹರಿಸುವ ಕೆಲಸವಾಗಬೇಕು ಎಂದರು.

ವಾತಾವರಣ ಕೂಡಾ ಬೆಳೆಯ ಮೇಲೆ ಪರಿಣಾಮ ಬೀರಲಿದ್ದು, ರೋಗಗಳ ನಿಯಂತ್ರಿಸುವುದು ಅಗತ್ಯವಾಗಿದೆ. ವೈಜ್ಞಾನಿಗಕ ಪದ್ದತಿಯಲ್ಲಿ ಬೆಳೆದಲ್ಲಿ ಮಾತ್ರ ಲಾಭದಾಯಕ ಬೆಳೆಯಾಗಲಿದೆ. ಅತೀಯಾದ ರಾಸಾಯನಿಕ ಬಳಕೆ ಮಾಡಿವದನ್ನು ಬಿಡಬೇಕು. ಇದರಿಂದ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಉತ್ಪಾದನೆ ಜೊತೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಭಾರತ ದೇಶ ಕೃಷಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಮೆಣಸಿನಕಾಯಿಯನ್ನು ಶೇ.40 ರಷ್ಟು ಬೆಳೆಯಲಾಗುತ್ತಿದೆ. ಬೇರೆ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ದೇಶದ ಆಂದ್ರ, ತೇಲಂಗಾಣ, ಮಧ್ಯ ಪ್ರದೇಶ, ಕೋರಿಯಾ ಹಾಗೂ ಓಡಿಸ್ಸಾ ರಾಜ್ಯಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

ನವದೆಹಲಿಯ ಐಸಿಎಸ್‍ಆರ್‍ನ ಮಾಜಿ ಡಿಡಿಜಿ ಡಾ.ಎನ್.ಕೆ.ಕೃಷ್ಣಕುಮಾರ ಮಾತನಾಡಿ ಕರ್ನಾಟಕದಲ್ಲಿ ಬ್ಯಾಡಗಿ ಮೆಣಸಿನಕಾಯಿ ಹೆಚ್ಚು ಖ್ಯಾತಿ ಪಡೆದರೆ, ಗುಜರಾತದಲ್ಲಿ ಕೃಷ್ಣಪ್ರಭಾ ಮೆಣಸಿನಕಾಯಿ ಖ್ಯಾತಿ ಪಡೆದಿದೆ. ಬ್ಯಾಡಗಿ ಮೆಣಸಿಣಕಾಯಿಯಲ್ಲಿ ನಾನಾ ಬಗೆಗಳಿವೆ. ಮೆಣಸಿನಕಾಯಿ ಬೆಳೆಗೆ ಅಂಟಿಕೊಳ್ಳುವ ರೋಗ ನಿಯಂತ್ರಣಕ್ಕೆ ಪರಿಹಾರವಿದೆ. ರೈತರು ರಾಸಾಯನಿಕ ಬಳಸುತ್ತಿರುವದರಿಂದ ರಪ್ತಿಗೆ ಅಡಚಣೆ ಆಗಿದೆ. ರಾಸಾಯನಿಕ ಬಳಕೆ ಕಡಿಮೆಯಾಗಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande